×
Ad

ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಿಸಲು ವಿಶ್ವಸಂಸ್ಥೆಗೆ ಪಾಕ್ ಒತ್ತಾಯ

Update: 2016-11-30 22:05 IST

ಇಸ್ಲಾಮಾಬಾದ್, ನ. 30: ಕಾಶ್ಮೀರ ವಿವಾದದ ಶಾಂತಿಯುತ ಇತ್ಯರ್ಥದಲ್ಲಿ ಪಾತ್ರ ವಹಿಸುವಂತೆ ಪಾಕಿಸ್ತಾನ ಬುಧವಾರ ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ.

 ತನ್ನದೇ ನಿರ್ಣಯವನ್ನು ಜಾರಿಗೊಳಿಸುವುದು ವಿಶ್ವಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಅದು ಹೇಳಿದೆ.

‘‘ಪಾಕಿಸ್ತಾನದ ಕಳವಳದ ಹೊರತಾಗಿಯೂ, ಕಾಶ್ಮೀರದಲ್ಲಿ 10 ಲಕ್ಷಕ್ಕೂ ಅಧಿಕ ಭಾರತೀಯ ಸೈನಿಕರು ಜಮಾವಣೆಗೊಂಡಿದ್ದಾರೆ. ಇದು ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಸೇನಾ ದಟ್ಟಣೆಯಾಗಿದೆ. ವಿಶ್ವಸಂಸ್ಥೆಯ ನಿರ್ಣಯವನ್ನು ಜಾರಿಗೊಳಿಸಲು ಇದು ಅಡಚಣೆಯಾಗಿದೆ’’ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಕಚೇರಿಯ ವಕ್ತಾರ ನಫೀಸ್ ಝಕಾರಿಯ ಹೇಳಿದರು.

ಅವರು ರೇಡಿಯೊ ಪಾಕಿಸ್ತಾನದ ‘ಕರೆಂಟ್ ಅಫೇರ್ಸ್’ ಚಾನೆಲ್‌ನಲ್ಲಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News