ಚಿಕ್ಕರಾಯಪ್ಪ, ಜಯಚಂದ್ರರನ್ನು ಸೇವೆಯಿಂದ ಅಮಾನತುಗೊಳಿಸಿದ ರಾಜ್ಯ ಸರಕಾರ

Update: 2016-12-02 08:00 GMT

 ಬೆಂಗಳೂರು, ಡಿ.2: ಭ್ರಷ್ಟ ಅಧಿಕಾರಿಗಳಾದ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿಎನ್ ಚಿಕ್ಕರಾಯಪ್ಪ ಹಾಗೂ ಕರ್ನಾಟಕ ಹೆದ್ದಾರಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ ಎಸ್‌ಸಿ ಜಯಚಂದ್ರ ಅವರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರಕಾರ ಆದೇಶ ನೀಡಿದೆ.

 ಕರ್ನಾಟಕ ಹಾಗೂ ಗೋವಾ ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರ ಈ ಇಬ್ಬರು ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿ 6 ಕೋಟಿ ರೂ. ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡಿರುವ 6 ಕೋಟಿ ರೂ.ಗಳಲ್ಲಿ 4.7 ಕೋಟಿ ರೂ.ವೌಲ್ಯದ 2000 ರೂ. ಹೊಸ ನೋಟುಗಳು ಇದ್ದವು.

ವಿಧಾನಪರಿಷತ್ತಿನಲ್ಲಿ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಇಬ್ಬರು ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದು ಘೋಷಿಸಿದರು.

ತಮಿಳುನಾಡಿನ ಈರೋಡ್ ಜಿಲ್ಲೆಯ 4 ಖಾಸಗಿ ಬ್ಯಾಂಕ್‌ಗಳಿಂದ ಹೊಸ ನೋಟುಗಳನ್ನು ಪಡೆಯಲಾಗಿದ್ದು, ನೋಟುಗಳನ್ನು ಪಡೆಯಲು ಆ ರಾಜ್ಯದ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸಾಥ್ ನೀಡಿದ್ದಾರೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News