ಬ್ಯಾಂಕುಗಳನ್ನೇ ಯಾಮಾರಿಸಿದ ಸಾಮಾಜಿಕ ಜಾಲತಾಣಗಳ ವದಂತಿ ಜಾಲ

Update: 2016-12-02 09:35 GMT

ಸಾಮಾಜಿಕ ತಾಣಗಳಲ್ಲಿ ನೋಟು ರದ್ದತಿಗೆ ಸಂಬಂಧಿಸಿ ಹಲವು ಊಹಾಪೋಹಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕರಿಗೆ ಗೊಂದಲ ತರುವ ಗಾಸಿಪ್‌ಗಳನ್ನು ನಂಬದಂತೆ ಹೇಳಿದೆ. ಬ್ಯಾಂಕ್‌ಗಳಿಗೆ ನೀಡಲಾಗಿರುವ ಸಲಹೆಯಲ್ಲಿ ಜನರಲ್ ಮ್ಯಾನೇಜರ್ ಸುಮನ್ ರೇ ಅವರು ಅಭದ್ರ ಅಥವಾ ಅನಧಿಕೃತ ಮೂಲವಾದ ಸಾಮಾಜಿಕ ತಾಣಗಳನ್ನು ಮಾಹಿತಿಗಾಗಿ ಆಶ್ರಯಿಸದಂತೆ ಸೂಚಿಸಿದ್ದಾರೆ.

ನಿರ್ದಿಷ್ಟ ಬ್ಯಾಂಕ್‌ನೋಟುಗಳನ್ನು ಹಿಂದಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಲ ಕಾಲಕ್ಕೆ ಬ್ಯಾಂಕ್‌ಗಳಿಗೆ ಆರ್‌ಬಿಐ ವೆಬ್‌ತಾಣದಲ್ಲಿ (www.rbi.org.in) ಮತ್ತು ಅಧಿಕೃತ ಇಮೇಲ್‌ಗಳ ಮೂಲಕ ಮಾಹಿತಿಯನ್ನು ಪ್ರಕಟಿಸಲಾಗುತ್ತಿದೆ. ಆದರೆ ಆರ್‌ಬಿಐನಿಂದ ಬಂದಿರುವ ನಿರ್ದೇಶನಗಳು/ಸೂಚನೆಗಳೆಂದು ಕೆಲವು ಮಾಹಿತಿಗಳು ಸಾಮಾಜಿಕ ತಾಣದಲ್ಲಿ ಪ್ರಸಾರವಾಗುತ್ತಿವೆ. ಇದು ಸಾರ್ವಜನಿಕರು/ ಬ್ಯಾಂಕ್ ಸಿಬ್ಬಂದಿಯಲ್ಲಿ ಗೊಂದಲ ಮೂಡಿಸಿದೆ. ಹೀಗಾಗಿ ಬ್ಯಾಂಕ್‌ಗಳು ವೆಬ್‌ತಾಣದಲ್ಲಿ (www.rbi.org.in)  ಅಪ್‌ಲೋಡ್ ಮಾಡಿರುವ ಅಥವಾ ಅಧಿಕೃತ ಇಮೇಲ್ ಮೂಲಕ ಬಂದಿರುವ ಸೂಚನೆಗಳನ್ನು ಮಾತ್ರ ಪಾಲಿಸಬೇಕು ಎಂದು ಎಚ್ಚರಿಕೆ ಕೊಡಲಾಗುತ್ತಿದೆ ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಬ್ಯಾಂಕುಗಳು ಇತರ ಅಭದ್ರ ಮತ್ತು ಅನಧಿಕೃತ ಮಾಹಿತಿ ಮೂಲವಾದ ಸಾಮಾಜಿಕ ತಾಣಗಳನ್ನು ನಂಬಬಾರದು ಮತ್ತು ಅಲ್ಲಿ ಅಧಿಕೃತವೆಂದು ಪ್ರಶ್ನಾರ್ಹ ಮಾಹಿತಿಗಳು ಪ್ರಸಾರವಾಗುತ್ತಿವೆ ಎಂದು ಹೇಳಲಾಗಿದೆ. ನಕಲಿ ರೂ. 10ರ ನಾಣ್ಯ ಚಲಾವಣೆಯಲ್ಲಿದೆ ಎನ್ನುವ ಇತ್ತೀಚೆಗಿನ ಸುದ್ದಿ ಮತ್ತು ರೂ. 2000 ನೋಟುಗಳಲ್ಲಿ ನಾನೋ-ಜಿಪಿಎಸ್ ಚಿಪ್ ಇದೆ ಎನ್ನುವ ಸುದ್ದಿಗಳ ಹಿನ್ನೆಲೆಯಲ್ಲಿ ಈ ಸೂಚನೆ ಬಂದಿದೆ. ಇವೆರಡನ್ನೂ ಆರ್‌ಬಿಐ ಸುಳ್ಳೆಂದು ಹೇಳಿದೆ. ರೂ. 10ರ ನಾಣ್ಯಕ್ಕೆ ಸಂಬಂಧಿಸಿ ಅಂತಹ ಸುದ್ದಿಗೆ ಗಮನ ಕೊಡಬಾರದೆಂದು ಜನರಿಗೆ ಹೇಳಿದೆ. ಕಾನೂನುಬದ್ಧ ಟೆಂಡರ್ ತರುವವರೆಗೆ ಅವುಗಳನ್ನು ಬಳಸಬಹುದು ಎಂದೂ ಸೂಚಿಸಿದೆ. "ಕೆಲವು ಹೆಚ್ಚು ಮಾಹಿತಿ ಇಲ್ಲದ ವ್ಯಕ್ತಿಗಳು ಜನರ ಮನಸ್ಸಿನಲ್ಲಿ, ವ್ಯಾಪಾರಿಗಳು, ಅಂಗಡಿ ಮಾಲೀಕರಲ್ಲಿ ಸಂಶಯ ಬಿತ್ತಿದ್ದಾರೆ. ಹೀಗಾಗಿ ದೇಶದ ಕೆಲವೆಡೆ ಇವುಗಳ ಪ್ರಸಾರದಲ್ಲಿ ಗೊಂದಲ ಕಂಡುಬಂದಿದೆ" ಎಂದು ಆರ್‌ಬಿಐ ಹೇಳಿದೆ.

ರೂ. 2000 ನೋಟುಗಳಲ್ಲಿ ನಾನೋ- ಜಿಪಿಎಸ್ ಇದೆ. ಪ್ರತೀ ನೋಟನ್ನು ಟ್ರಾಕ್ ಮಾಡಲು ಕರಾರುವಕ್ಕಾದ ಸ್ಥಳವನ್ನು ಅದು ಸೂಚಿಸುತ್ತದೆ. ಅಲ್ಲದೆ ನೆಲದಡಿ 120 ಮೀಟರ್‌ಗಳಲ್ಲಿ ಇಟ್ಟರೂ ಈ ಹಣವನ್ನು ಪತ್ತೆ ಮಾಡಬಹುದು ಎಂದೂ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿತ್ತು. ಆರ್‌ಬಿಐ ಇದನ್ನು ಸುಳ್ಳೆಂದು ಹೇಳಿದೆ.

ಕೃಪೆ: http://indianexpress.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News