×
Ad

ಪಾನಸೋನಿಕ್ ಓಪನ್: ಮುಕೇಶ್ ಕುಮಾರ್ ಹೊಸ ದಾಖಲೆ

Update: 2016-12-04 23:47 IST

ಹೊಸದಿಲ್ಲಿ, ಡಿ.4: ಭಾರತದ ಮುಕೇಶ್ ಕುಮಾರ್ ರವಿವಾರ ಏಷ್ಯನ್ ಟೂರ್ ಪ್ರಶಸ್ತಿ ಜಯಿಸಿದ ಹಿರಿಯ ಗಾಲ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಕೇಶ್ ಪಾನಸೊನಿಕ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದರು. 51ರ ಪ್ರಾಯದ ಮುಕೇಶ್ ಈತನಕ 123 ಪಿಜಿಟಿಐ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು 206 ಅಂಕಗಳಲ್ಲಿ 10 ಅಂಕ ಗಳಿಸಿದ ಮುಕೇಶ್ ಏಷ್ಯನ್ ಟೂರ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದಾರೆ.

ಟೂರ್ನಿಯ ಅಂಕಪಟ್ಟಿಯಲ್ಲಿ ಭಾರತೀಯರು ಪ್ರಾಬಲ್ಯ ಸಾಧಿಸಿದ್ದಾರೆ. ಜ್ಯೋತಿ ರಾಂಧವ ಹಾಗೂ ರಶೀದ್ ಖಾನ್ 2ನೆ ಸ್ಥಾನ ಹಂಚಿಕೊಂಡರು. ರಾಂಧವ ಹಾಗೂ ರಶೀದ್ ಅಂತಿಮ ಸುತ್ತಿನಲ್ಲಿ 68ರಲ್ಲಿ ತಲಾ ನಾಲ್ಕು ಅಂಕ ಗಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News