ಪವಿತ್ರ ಕಾಬಾದೊಳಗೆ ಏನೇನಿದೆ ?

Update: 2016-12-05 13:23 GMT

180 ಚದರ ಮೀಟರ್‌ಗಿಂತ ಹೆಚ್ಚಿರದೆ ಇರುವ ಪ್ರದೇಶದಲ್ಲಿ ಮೂರು ಮರದ ಕಂಬಗಳು ಕಾಬಾದ ಮುಚ್ಚಿಗೆಯನ್ನು ಹಿಡಿದಿಟ್ಟಿದೆ. ಇಲ್ಲಿ ಬಳಸಲಾಗಿರುವ ಮರ ಅತೀ ಬಲಿಷ್ಠವಾಗಿದ್ದು, ಪ್ರವಾದಿಯ ಸಹಚರರಾದ ಅಬ್ದುಲ್ಲಾ ಬಿನ್ ಝಬೇರ್ ಇದನ್ನು ನಿರ್ಮಿಸಿದ್ದಾರೆ. ಇವು 1,350 ವರ್ಷಗಳಷ್ಟು ಹಳೆಯದಾದ ಇದು ಕರಿಕಂದು ಬಣ್ಣದಲ್ಲಿವೆ. ಪ್ರತೀ ಕಂಬದ ಪರಿಧಿಯೂ 150 ಸೆಂಟಿಮೀಟರ್‌ಗಳಲ್ಲಿದ್ದು, ವ್ಯಾಸ 44 ಸೆಂಟಿಮೀಟರ್‌ಗಳಾಗಿವೆ.

ಪ್ರತೀ ಕಂಬವೂ ಚೌಕಾಕಾರದ ಮರದ ಬುಡವನ್ನು ಹೊಂದಿದೆ. ಈ ಮೂರು ಕಂಬಗಳ ನಡುವೆ ಕಾಬಾರ ಉಡುಗೊರೆಯನ್ನು ಇಳಿ ಹಾಕಿರುವ ಕಂಬಿಯಂತಹ ತೊಲವಿದೆ. ಈ ತೊಲ ಎಲ್ಲಾ ಮೂರು ಕಂಬಗಳ ಮೂಲಕ ಹಾದು ಹೋಗುತ್ತದೆ ಮತ್ತು ಅದರ ಬದಿಗಳು ಉತ್ತರ ಮತ್ತು ದಕ್ಷಿಣದ ಗೋಡೆಗಳಿಗೆ ತಾಗಿರುತ್ತವೆ.

ಅಲ್ ಅರೆಬಿಯ ವರದಿ ಮಾಡಿರುವ ಪ್ರಕಾರ ಕಾಬಾದ ಬಲ ಒಳಾಂಗಣದಲ್ಲಿರುವ ನಡೆದು ಸಾಗುವ ಮೂಲೆಯಲ್ಲಿ ದ್ವಾರದ ಕಡೆಗೆ ಹೋಗುವ ಮೆಟ್ಟಿಲುಗಳನ್ನೂ ಹೊಂದಿದೆ. ಅದು ಕಿಟಕಿಗಳೇ ಇಲ್ಲದೆ, ವಿಶೇಷ ಬೀಗ ಇರುವ ಮುಚ್ಚಿಗೆಯ ಕಡೆಗೆ ಸಾಗುವ ಬಾಗಿಲು ಹೊಂದಿರುವ ಒಂದು ಮುಚ್ಚಿರುವ ಆಯತಾಕಾರದ ರಚನೆಯಂತೆ ಕಾಣುತ್ತಿದೆ. ಬಾಗಿಲಿನ ಮೇಲೆ ಸುಂದರವಾದ ರೇಷ್ಮೆ ಪರದೆಯನ್ನು ಹಾಕಲಾಗಿದ್ದು, ಅದರಲ್ಲಿ ಚಿನ್ನ ಮತ್ತು ಬೆಳ್ಳಿಯ ಕುಸುರಿಗಳಿವೆ.

ಕಾಬಾದ ನೆಲವನ್ನು ಮಾರ್ಬಲ್‌ನಿಂದ ಮಾಡಲಾಗಿದೆ ಎಂದೂ ಅಧ್ಯಕ್ಷರು ಹೇಳಿದ್ದಾರೆ. ಬಹುತೇಕ ಮಾರ್ಬಲ್ ಬಿಳಿ ಬಣ್ಣದಲ್ಲಿದ್ದು, ಕೆಲವು ಬಣ್ಣಗಳಲ್ಲಿವೆ. ಕಾಬಾ ಒಳಾಂಗಣದ ಗೋಡೆ ಬಣ್ಣದ ಮತ್ತು ಎದ್ದುಕಾಣುವಂತೆ ಚಿತ್ರಿಸಿರುವ ಮಾರ್ಬಲ್‌ನಿಂದ ನಿರ್ಮಿಸಲಾಗಿದೆ. ಕಾಬಾದ ಒಳಾಂಗಣವನ್ನು ಅಲ್ಲಾಹನ ಹೆಸರೂ ಸೇರಿದಂತೆ, ಕೆಂಪು ಬಿಳಿ ಕುಸುರಿ ಬರಹಗಳು ಇರುವ ರೇಷ್ಮೆ ಪರದೆಯಲ್ಲಿ ಮುಚ್ಚಲಾಗಿದೆ. ಈ ಪರದೆಯು ಕಾಬಾದ ಮುಚ್ಚಿಗೆಯನ್ನೂ ಮುಚ್ಚಿಕೊಂಡಿದೆ.

ಕಾಬಾದ ಒಳಗೆ ಎಂಟು ಕಲ್ಲುಗಳು ತುಲುತು ಲಿಪಿ ಬಳಸಿ ಅರೆಬಿಕ್ ಹಸ್ತಾಕ್ಷರಗಳಲ್ಲಿವೆ. ಒಂದು ಕಲ್ಲನ್ನು ಕುಫಿಕ್ ಲಿಪಿ ಬಳಸಿ ಅರೆಬಿಕ್ ಹಸ್ತಾಕ್ಷರದಿಂದ ಅಲಂಕರಿಸಲಾಗಿದೆ. ಕಲ್ಲುಗಳಲ್ಲಿರುವ ಶಬ್ದಗಳನ್ನು ಅಮೂಲ್ಯವಾದ, ಬಣ್ಣದ ಮಾರ್ಬಲ್‌ಗಳಿಂದ ಬರೆಯಲಾಗಿದೆ. ಇವುಗಳನ್ನು 6ನೇ ಶತಮಾನದಲ್ಲಿ ಬರೆಯಲಾಗಿದೆ.

ಪೂರ್ವದ ಗೋಡೆ ಮತ್ತು ಕಾಬಾದ ದ್ವಾರ ಮತ್ತು ಬಾಬುತ್ ತೌಬಾ (ಪ್ರಾತಿನಿಧಿಕ ಬಾಗಿಲು) ನಡುವೆ, ರಾಜ ಫಹದ್ ಬಿನ್ ಅಬ್ದುಲಾಝಿಝ್ ಅಲ್ ಸೌದ್ ಅವರ ಸಾಕ್ಷ್ಯವು ಮಾರ್ಬಲ್ ಬೋರ್ಡ್ ಮೇಲೆ ನವೀಕರಣದ ದಿನಾಂಕಗಳ ಸೂಚನೆಯಾಗಿದೆ. ಅದನ್ನು ಕಾಬಾ ರಚನೆಗೆ ದಿವಂಗತ ರಾಜರು ಮಾಡಿದ್ದಾರೆ. ಕಾಬಾದ ಒಳಗಿನ ಬರಹಕಲ್ಲುಗಳು ಒಟ್ಟು 10 ಇವೆ. ಎಲ್ಲವನ್ನೂ ಬಿಳಿ ಮಾರ್ಬಲ್‌ನಲ್ಲಿ ರಚಿಸಲಾಗಿದೆ.

ಕೃಪೆ: english.alarabiya.net

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News