ಪರ್ಲ್ ಹಾರ್ಬರ್‌ಗೆ ಭೇಟಿ ನೀಡಲಿರುವ ಜಪಾನ್ ಪ್ರಧಾನಿ

Update: 2016-12-05 16:10 GMT

ಟೋಕಿಯೊ, ಡಿ. 5: ಪರ್ಲ್ ಹಾರ್ಬರ್‌ಗೆ ಭೇಟಿ ನೀಡುವ ಮೊದಲ ಜಪಾನ್ ಪ್ರಧಾನಿ ಶಿಂರೊ ಅಬೆ ಆಗಲಿದ್ದಾರೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಜೊತೆೆ ಮಾತುಕತೆ ನಡೆಸುವುದಕ್ಕಾಗಿ ಹವಾಯಿಗೆ ಈ ತಿಂಗಳು ಭೇಟಿ ನೀಡುವುದಾಗಿ ಅವರು ಸೋಮವಾರ ಘೋಷಿಸಿದ್ದಾರೆ.

1941 ಡಿಸೆಂಬರ್ 7ರಂದು ಪೆಸಿಫಿಕ್ ಸಾಗರದ ದ್ವೀಪ ಪರ್ಲ್ ಹಾರ್ಬರ್ ಮೇಲೆ ಜಪಾನ್ ಅನಿರೀಕ್ಷಿತ ದಾಳಿ ನಡೆಸಿತ್ತು. ಆ ದಾಳಿಯ ಬಳಿಕ ಪೆಸಿಫಿಕ್‌ನಲ್ಲಿ ದ್ವಿತೀಯ ಮಹಾಯುದ್ಧ ಆರಂಭವಾಗಿತ್ತು.

ಡಿಸೆಂಬರ್ 26 ಮತ್ತು 27ರಂದು ಅಬೆ ಹವಾಯಿಯಲ್ಲಿರುತ್ತಾರೆ. ಆ ಸಂದರ್ಭದಲ್ಲಿ ಅವರು ಜಪಾನ್ ದಾಳಿ ನಡೆಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಜಪಾನ್‌ನ ಹಿರೋಶಿಮ ನಗರದ ಮೇಲೆ ಅಮೆರಿಕ 1945 ಆಗಸ್ಟ್ 6ರಂದು ಪರಮಾಣು ಬಾಂಬ್ ಹಾಕಿತ್ತು ಹಾಗೂ ಮೂರು ದಿನಗಳ ಬಳಿಕ ನಾಗಸಾಕಿಯಲ್ಲಿ ಇನ್ನೊಂದು ಪರಮಾಣು ಬಾಂಬ್ ಹಾಕಿತ್ತು. ಅದರೊಂದಿಗೆ ದ್ವಿತೀಯ ಮಹಾಯುದ್ಧ ಕೊನೆಗೊಂಡಿತ್ತು.

ಅಮೆರಿಕದ ಪರಮಾಣು ದಾಳಿಗೆ ಒಳಗಾದ ಹಿರೋಶಿಮ ನಗರಕ್ಕೆ ಒಬಾಮ ಮೇ ತಿಂಗಳಲ್ಲಿ ಭೇಟಿ ನೀಡಿದ್ದರು. ಅದರ ಬೆನ್ನಿಗೇ ಈಗ ಜಪಾನ್ ಪ್ರಧಾನಿ ಪರ್ಲ್ ಹಾರ್ಬರ್‌ಗೆ ಭೇಟಿ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News