×
Ad

ಕಾಶ್ಮೀರ ಪ್ರತಿಭಟನಕಾರರ ವಿರುದ್ಧ ವಿವೇಚನಾರಹಿತ ಬಲ ಪ್ರಯೋಗ : ಅಮೆರಿಕದ ಮಾನವಹಕ್ಕು ಗುಂಪು ಆರೋಪ

Update: 2016-12-07 21:22 IST

ವಾಶಿಂಗ್ಟನ್, ಡಿ. 7: ಈ ವರ್ಷ ಕಾಶ್ಮೀರದಲ್ಲಿ ನಡೆದ ಘರ್ಷಣೆಯ ವೇಳೆ ಭಾರತೀಯ ಭದ್ರತಾ ಪಡೆಗಳು ಪ್ರತಿಭಟನಕಾರರ ವಿರುದ್ಧ ಪೆಲೆಟ್ ಗನ್‌ಗಳಂಥ ಆಯುಧಗಳನ್ನು ಬಳಸಿ ‘ಅತಿಯಾದ’ ಮತ್ತು ‘ವಿವೇಚನಾರಹಿತ’ ಬಲ ಪ್ರಯೋಗ ಮಾಡಿವೆ ಎಂದು ಅಮೆರಿಕದ ಆರೋಗ್ಯ ಹಕ್ಕುಗಳ ಗುಂಪು ‘ಫಿಸಿಶಿಯನ್ಸ್ ಫಾರ್ ಹ್ಯೂಮನ್ ರೈಟ್ಸ್ (ಪಿಎಚ್‌ಆರ್) ಆರೋಪಿಸಿದೆ.

ಭದ್ರತಾ ಪಡೆಗಳ ಇಂಥ ಕ್ರಮಗಳಿಂದ ಜನರು ಸತ್ತಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸರು ಪ್ರತಿಭಟನಕಾರರ ವಿರುದ್ಧ ಅತಿಯಾದ ಬಲ ಪ್ರಯೋಗ ಮಾಡಿದ್ದಾರೆ ಎಂದು ಗುಂಪು ಆರೋಪಿಸಿದೆ. ಅದೇ ವೇಳೆ, ಈ ಪಡೆಗಳು ಬಳಸಿರುವ ಆಯುಧಗಳನ್ನು ‘ಮಾರಕವಲ್ಲ’ ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದಿದೆ.

 ಪ್ರತಿಭಟನಕಾರರು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಳ್ಳಲು ಟಿಯರ್ ಗ್ಯಾಸ್ ಗ್ರೆನೇಡ್‌ಗಳು, ಪೆಪ್ಪರ್ ಗ್ಯಾಸ್ ಶೆಲ್‌ಗಳು, ಲೈವ್ ಆ್ಯಮುನಿಶನ್ ಮತ್ತು ಲೋಹದ ಪೆಲೆಟ್‌ಗಳಿಂದ ತುಂಬಿರುವ 12-ಗೇಜ್ ಶಾಟ್‌ಗನ್‌ಗಳ ಬಳಕೆ ಕಾರಣವಾಗಿದೆ ಎಂದಿದೆ.

‘‘ಸಾವು ನೋವಿನ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ ಈ ಶಸ್ತ್ರಗಳನ್ನು ಬಳಸಲಾಗಿದೆ ಎಂಬುದಾಗಿ ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ವಾಸ್ತವಿಕವಾಗಿ ಅವುಗಳ ಬಳಕೆಯಿಂದ ಸಾವು-ನೋವಿನ ಪ್ರಮಾಣದಲ್ಲಿ ಹೆಚ್ಚಾಗಿದೆ’’ ಎಂದು ಮಾಧ್ಯಮ ಪ್ರಕಟನೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News