×
Ad

ಚೀನಾ: ಇನ್ನೊಂದು ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ; 7 ಸಾವು

Update: 2016-12-07 21:27 IST

ಬೀಜಿಂಗ್, ಡಿ. 7: ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ನಡೆದ ಸ್ಫೋಟದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ನಾಪತ್ತೆಯಾಗಿದ್ದಾರೆ.

ಹುಬೈ ಪ್ರಾಂತದಲ್ಲಿ ಸೋಮವಾರ ರಾತ್ರಿ ಸ್ಫೋಟ ನಡೆದ ಬಳಿಕ, ಭೂಮಿಯಡಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ತಲುಪಲು ರಕ್ಷಣಾ ಸಿಬ್ಬಂದಿ ಈಗಲೂ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಸರಕಾರದ ಪ್ರಚಾರ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ರಕ್ಷಣಾ ಕಾರ್ಯಾಚರಣೆಗೆ ಪೂರಕವಾಗಿ ರಕ್ಷಣಾ ಕಾರ್ಯಕರ್ತರು ಗಣಿಯೊಳಗೆ ಆಮ್ಲಜನಕವನ್ನು ಪೂರೈಸುತ್ತಿದ್ದಾರೆ.

ಇದು ಒಂದ ವಾರದ ಅವಧಿಯಲ್ಲಿ ನಡೆದ ಮೂರನೆ ಭಯಾನಕ ಗಣಿ ಅಪಘಾತವಾಗಿದೆ. ಈ ದುರಂತಗಳಲ್ಲಿ ಒಟ್ಟು 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News