×
Ad

ಪತನಗೊಂಡ ಪಾಕ್ ವಿಮಾನದಲ್ಲಿದ್ದರು ಗಾಯಕ ಜುನೈದ್ ಜಂಶೇದ್

Update: 2016-12-07 22:13 IST

ಇಸ್ಲಾಮಾಬಾದ್, ಡಿ. 7 : ಇಲ್ಲಿನ ಅಬೋಟಾಬಾದ್ ಬಳಿ ಪತನಗೊಂಡಿರುವ ಪಿಕೆ - 661 ವಿಮಾನದಲ್ಲಿ ಪಾಕಿಸ್ತಾನದ ಮಾಜಿ ಪಾಪ್ ಸ್ಟಾರ್ ಹಾಗು ಹಾಗು ಹಾಲಿ ಧಾರ್ಮಿಕ ಪ್ರವಚನಕಾರ, ಗಾಯಕ ಜುನೈದ್ ಜಂಶೇದ್ ಇದ್ದರು ಎಂದು ಅವರ ವ್ಯವಸ್ಥಾಪಕರನ್ನು ಉಲ್ಲೇಖಿಸಿ  ಸಿ ಎನ್ ಎನ್ ವರದಿ ಮಾಡಿದೆ. 


ಒಟ್ಟು 48 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈವರೆಗೆ 43 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ. ಅನಧಿಕೃತ ಮೂಲಗಳ ಪ್ರಕಾರ ಜುನೈದ್ ಅವರ ಪತ್ನಿ ಹಾಗು ಮಗು ಕೂಡ ಅವರ ಜೊತೆ ಪ್ರಯಾಣಿಸುತ್ತಿತ್ತು ಎಂದು ಹೇಳಲಾಗಿದೆ. ಆದರೆ ಇದು ಅಧಿಕೃತವಾಗಿ ಖಚಿತಗೊಂಡಿಲ್ಲ. 


ವೈಟಲ್ ಸೈನ್ಸ್ ಎಂಬ ಪಾಪ್ ಬ್ಯಾಂಡ್ ಮೂಲಕ 1980 ರ ದಶಕದಲ್ಲಿ ಜುನೈದ್ ಪಾಕಿಸ್ತಾನದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದರು. 1990 ರ ದಶಕದಲ್ಲಿ ಯಶಸ್ವಿ ಪಾಪ್ ವೃತ್ತಿ ಜೀವನವನ್ನು ಬಿಟ್ಟ ಜುನೈದ್ ಧಾರ್ಮಿಕ ರಂಗದತ್ತ ಗಮನ ಕೇಂದ್ರೀಕರಿಸಿದರು. ನಶೀದ್ ಹಾಡುಗಳ ಮೂಲಕ ಜುನೈದ್ ಭಾರೀ ಜನಪ್ರಿಯತೆ ಗಳಿಸಿದ್ದರು. ಉತ್ತರ ಪಾಕಿಸ್ತಾನದ ರಮ್ಯಾ ಸ್ಥಳ ಚಿತ್ರಾಲ್ ನಿಂದ ಅವರು ರವಿವಾರ ಟ್ವೀಟ್ ಮಾಡಿ ಇದು ಭೂಮಿ ಮೇಲಿನ ಸ್ವರ್ಗ ಎಂದು ಹೇಳಿದ್ದರು. ಅಲ್ಲಿಂದಲೇ ಬುಧವಾರ ವಿಮಾನ ಹೊರಟಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News