ತ್ರಿವಳಿ ತಲಾಕ್ ಸಂವಿಧಾನ ವಿರೋಧಿ

Update: 2016-12-08 07:07 GMT

 ಲಕ್ನೋ, ಡಿ.8: ತ್ರಿವಳಿ ತಲಾಕ್ ಪದ್ಧತಿ ಸಂವಿಧಾನ ಬಾಹಿರ. ತ್ರಿವಳಿ ತಲಾಕ್‌ನಿಂದ ಮಹಿಳೆಯರ ಹಕ್ಕು ಉಲ್ಲಂಘನೆಯಾಗುತ್ತಿದೆ. ಯಾವುದೇ ವೈಯಕ್ತಿಕ ಕಾನೂನು ಸಂವಿಧಾನಕ್ಕಿಂತ ದೊಡ್ಡದಲ್ಲ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಪೀಠ ಗುರುವಾರ ತೀರ್ಪು ನೀಡಿದೆ.

ತ್ರಿವಳಿ ತಲಾಕ್‌ಗೆ ಸಂಬಂಧಿಸಿ ಇಬ್ಬರು ಮುಸ್ಲಿಂ ಮಹಿಳೆಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತ್ರಿವಳಿ ತಲಾಕ್ ರದ್ದುಪಡಿಸಬೇಕೆಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು ಅಲ್ಲಿ ಅಂತಿಮ ತೀರ್ಪು ಇನ್ನಷ್ಟೇ ಬರಬೇಕಾಗಿದೆ.

ಹಲವು ವ್ಯಕ್ತಿಗಳು ಹಾಗು ಎನ್ ಜಿ ಓ ಗಳು ತ್ರಿವಳಿ ತಲಾಕ್ ನಿಷೇಧಿಸಬೇಕೆಂದು ಸಲ್ಲಿಸಿರುವ ಮನವಿ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಯಲ್ಲಿದೆ. ಇದೇ ಮೊದಲ ಬಾರಿ ಸರಕಾರ ಸುಪ್ರೀಂ ಕೋರ್ಟ್ ನಲ್ಲಿ ತ್ರಿವಳಿ ತಲಾಕ್ ಅನ್ನು ವಿರೋಧಿಸಿ ಹೇಳಿಕೆ ನೀಡಿದೆ. ಸರಕಾರದ ನಿಲುವನ್ನು  ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಿರೋಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News