ಹೈದರಾಬಾದ್‌ನಲ್ಲಿ ಏಳು ಅಂತಸ್ತಿನ ಅಪಾರ್ಟ್‌ಮೆಂಟ್ ಕುಸಿತ; ಹತ್ತಕ್ಕೂ ಅಧಿಕ ಜನರು ಸಿಲುಕಿರುವ ಶಂಕೆ
Update: 2016-12-08 23:26 IST
ಹೈದರಾಬಾದ್, ಡಿ.8:ಇಲ್ಲಿನ ನಾನಕರಾಮಗುಡ ಎಂಬಲ್ಲಿ ಇಂದು ಏಳು ಅಂತಸ್ತಿನ ಅಪಾರ್ಟ್‌ಮೆಂಟ್ ಕುಸಿದು ಬಿದ್ದ ಪರಿಣಾಮವಾಗಿ 10ಕ್ಕೂ ಅಧಿಕ ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ನಾರಾಯಣ ಸಿಂಗ್‌ಗೆ ಸೇರಿದ ಕಟ್ಟಡದಲ್ಲಿ ಹದಿನಾಲ್ಕು ಕುಟುಂಬಗಳು ವಾಸವಾಗಿದೆ. ಪೊಲೀಸರು ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.