ಸಂಘರ್ಷಪೀಡಿತ ರಖೈನ್‌ಗೆ ಭೇಟಿ ನೀಡಿ : ಸೂ ಕಿಗೆ ವಿಶ್ವಸಂಸ್ಥೆ ಒತ್ತಾಯ
Update: 2016-12-09 21:32 IST
ಯಾಂಗನ್, ಡಿ. 9: ರೊಹಿಂಗ್ಯ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ಸೇನೆ ಅಮಾನುಷ ದಮನ ಕಾರ್ಯಾಚರಣೆ ನಡೆಸುತ್ತಿರುವ ರಖೈನ್ ರಾಜ್ಯಕ್ಕೆ ಭೇಟಿ ನೀಡುವಂತೆ ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.
ರೊಹಿಂಗ್ಯ ಮುಸ್ಲಿಮರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವುದ್ಕಕಾಗಿ ನೊಬೆಲ್ ಶಾಂತಿ ಪುರಸ್ಕೃತೆ ಸೂ ಕಿ ಭಾರೀ ಅಂತಾರಾಷ್ಟ್ರೀಯ ಟೀಕೆಯನ್ನು ಎದುರಿಸುತ್ತಿದ್ದಾರೆ.