×
Ad

ದಕ್ಷಿಣ ಚೀನಾ ಸಮುದ್ರದಲ್ಲಿ ವಿಯೆಟ್ನಾಮ್‌ನಿಂದ ಹೂಳೆತ್ತುವ ಕಾರ್ಯ

Update: 2016-12-09 21:41 IST

ಸಿಡ್ನಿ, ಡಿ. 9: ದಕ್ಷಿಣ ಚೀನಾ ಸಮುದ್ರದ ವಿವಾದಾಸ್ಪದ ಕೊಲ್ಲಿಯಲ್ಲಿ ವಿಯೆಟ್ನಾಮ್ ಹೂಳೆತ್ತುವ ಕಾರ್ಯವನ್ನು ಆರಂಭಿಸಿದೆ ಎನ್ನುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ.

ಆಯಕಟ್ಟಿನ ಜಲಮಾರ್ಗ ಮೇಲಿನ ತನ್ನ ಹಕ್ಕನ್ನು ಪ್ರತಿಪಾದಿಸಲು ಕಮ್ಯುನಿಸ್ಟ್ ದೇಶ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಸ್ಪ್ರಾಟ್ಲಿ ದ್ವೀಪ ಸಮೂಹದಲ್ಲಿರುವ ಲ್ಯಾಡ್ ರೀಫ್‌ನಲ್ಲಿ ನಡೆದಿರುವ ಈ ಕಾಮಗಾರಿಯು ವಿಯೆಟ್ನಾಮ್‌ನ ದಕ್ಷಿಣ ಚೀನ ಸಮುದ್ರದ ಪ್ರಮುಖ ಎದುರಾಳಿ ಚೀನಾದ ಆಕ್ರೋಶಕ್ಕೆ ಕಾರಣವಾಗುವ ನಿರೀಕ್ಷೆಯಿದೆ.

ಸ್ಪ್ರಾಟ್ಲಿ ದ್ವೀಪದ ತುದಿಯಲ್ಲಿರುವ ಲ್ಯಾಡ್ ರೀಫ್ ಉಬ್ಬರದ ಅವಧಿಯಲ್ಲಿ ಸಂಪೂರ್ಣವಾಗಿ ನೀರಿನಿಂದ ಆವೃತವಾಗಿರುತ್ತದೆ. ಆದರೆ, ಅಲ್ಲಿ ಒಂದು ದ್ವೀಪಸ್ತಂಭ ಮತ್ತು ಒಂದು ಸೇನಾ ಠಾಣೆಯಿದೆ. ಈ ಠಾಣೆಯಲ್ಲಿ ವಿಯೆಟ್ನಾಮ್ ಸೈನಿಕರ ಒಂದು ಸಣ್ಣ ತುಕಡಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News