×
Ad

ನೈಜೀರಿಯ: ಚರ್ಚ್ ಕುಸಿದು 160 ಮಂದಿ ಸಾವು

Update: 2016-12-11 23:39 IST

ವರಿ (ನೈಜೀರಿಯ), ಡಿ. 11: ದಕ್ಷಿಣ ನೈಜೀರಿಯದಲ್ಲಿ ಶನಿವಾರ ಕ್ರೈಸ್ತರು ಪ್ರಾರ್ಥನಾನಿರತರಾಗಿದ್ದಾಗ ಚರ್ಚೊಂದರ ಮೇಲ್ಛಾವಣಿ ಕುಸಿದು ಕನಿಷ್ಠ 160 ಮಂದಿ ಸಾವಿಗೀಡಾಗಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರೊಬ್ಬರು ತಿಳಿಸಿದರು.

ರೀನರ್ಸ್ ಬೈಬಲ್ ಚರ್ಚ್ ಇಂಟರ್‌ನ್ಯಾಶನಲ್ ಹೊಸದಾಗಿ ನಿರ್ಮಾಣಗೊಳ್ಳುತ್ತಿತ್ತು. ಶನಿವಾರ ನಡೆಯಲಿರುವ ಸಮಾರಂಭಕ್ಕಾಗಿ ಕಟ್ಟಡವನ್ನು ಸಿದ್ಧಪಡಿಸಲು ಕಾರ್ಮಿಕರು ಇನ್ನೂ ಕೆಲಸದಲ್ಲಿ ನಿರತರಾಗಿದ್ದರು.

ನೂರಾರು ಮಂದಿ ಚರ್ಚ್‌ನ ಒಳಗಿದ್ದಾಗ ಛಾವಣಿಯ ಲೋಹದ ತೊಲೆಗಳು ಅವರ ಮೇಲೆ ಕುಸಿದವು.

ಛಾವಣಿಯು ದೊಡ್ಡ ಸದ್ದಿನೊಂದಿಗೆ ಕುಸಿಯಿತು. ಮೊದಲು ಅಲ್ಲಿದ್ದವರು ಬಾಂಬ್ ಸ್ಫೋಟವಾಗಿರಬಹುದೆಂದು ಭಾವಿಸಿದರು. ಆದರೆ, ಬಳಿಕ ನೋಡಿದಾಗ ಅಲ್ಲಿ ಚರ್ಚ್ ಇರಲಿಲ್ಲ.

ಬಳಿಕ ಕ್ರೇನ್ ಮೂಲಕ ಕಬ್ಬಿಣದ ತೊಲೆಗಳನ್ನು ಮೇಲೆತ್ತಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News