ಉಮಾಭಾರತಿ ಭಾಷಣಕ್ಕೆ ಸ್ಟೂಲ್ ಹಿಡಿದುಕೊಂಡು ಕಾಲಬುಡದಲ್ಲಿ ಕುಳಿತ ಸುರಕ್ಷತಾ ಸಿಬ್ಬಂದಿ

Update: 2016-12-12 14:25 GMT

ಝಾನ್ಸಿ, ಡಿ.12: ಇಲ್ಲಿ ನಡೆದ ಸಮಾವೇಶವೊಂದರಲ್ಲಿ ಕೇಂದ್ರ ಸಚಿವೆ ಉಮಾಭಾರತಿ ಅವರು ಭಾಷಣ ಮಾಡುತ್ತಿರುವಾಗ ಅವರ ಸುರಕ್ಷಾ ತಂಡದ ಸಿಬ್ಬಂದಿ ಒಬ್ಬ ಅವರ ಕಾಲಿನ ಬಳಿ ಕುಳಿತುಕೊಂಡು ಅವರು ನಿಂತ ಸ್ಟೂಲ್ ಹಿಡಿದುಕೊಂಡ ಘಟನೆ ನಡೆದಿದೆ.

ಬಿಜೆಪಿಯ ಯುವ ಸಮ್ಮೇಳನವೊಂದರಲ್ಲಿ ಭಾಷಣ ಮಾಡಲು ಉಮಾಭಾರತಿ ಬಂದಿದ್ದರು. ಭಾಷಣ ಮಾಡಲು ವೇದಿಕೆಯತ್ತ ಬಂದ ಉಮಾಭಾರತಿ ಮೈಕ್ ಸ್ವಲ್ಪ ಎತ್ತರದಲ್ಲಿರುವುದು ಗಮನಕ್ಕೆ ಬಂತು. ಇದರಿಂದ ಅವರಿಗೆ ಮಾತನಾಡಲು ಅನನುಕೂಲವಾಯಿತು. ತಕ್ಷಣ ಅವರಿಗಾಗಿ ಸಣ್ಣ ಸ್ಟೂಲ್ ಒಂದನ್ನು ಸಂಘಟಕರು ವ್ಯವಸ್ಥೆ ಮಾಡಿದರು ಅದರ ಮೇಲೆ ನಿಂತುಕೊಂಡು ಉಮಾಭಾರತಿಯವರು ಭಾಷಣ ಮುಂದುವರಿಸಿದರು. ಈ ಸಂದರ್ಭದಲ್ಲಿ ಅವರು ನಿಂತುಕೊಂಡ ಸ್ಟೂಲ್ ಅಲುಗಾಡದಂತೆ ಅವರ ಜೊತೆಗಿದ್ದ ಸುರಕ್ಷತಾ ಸಿಬ್ಬಂದಿಯೊಬ್ಬ ಅವರ ಕಾಲಿನ ಬಳಿ ಕುಳಿತುಕೊಂಡು ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ.

ಸಚಿವೆಯ ಭಾಷಣ ಮುಗಿಯುವವರೆಗೂ ಆತ ಅದೇ ರೀತಿ ಅವರ ಕಾಲಿನ ಬುಡದಲ್ಲೇ ಕುಳಿತುಕೊಂಡಿದ್ದರೂ ಯಾರೂ ಆತನತ್ತ ಗಮನ ಹರಿಸಲಿಲ್ಲ.  ಸ್ವತಃ ಉಮಾಭಾರತಿ ಕೂಡ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News