‘ಟು ಸರ್, ವಿದ್ ಲವ್’ ಕಾದಂಬರಿಯ ಲೇಖಕ ನಿಧನ
Update: 2016-12-14 21:20 IST
ನ್ಯೂಯಾರ್ಕ್, ಡಿ. 14: ‘ಟು ಸರ್, ವಿತ್ ಲವ್’ ಎಂಬ ಜನಪ್ರಿಯ ಕಾದಂಬರಿಯ ಲೇಖಕ ಗಯಾನದ ಇ.ಆರ್. ಬ್ರೇತ್‌ವೇಟ್ ತನ್ನ 104ನೆ ವರ್ಷ ಪ್ರಾಯದಲ್ಲಿ ನಿಧನರಾಗಿದ್ದಾರೆ.
ಲಂಡನ್‌ನ ಪೂರ್ವದ ತುದಿಯಲ್ಲಿರುವ ಕೊಳೆಗೇರಿಗಳಲ್ಲಿ ಹಲವು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವಗಳನ್ನು ಬಳಸಿಕೊಂಡು ಅವರು ಬರೆದ ಈ ಕಾದಂಬರಿ ಭಾರೀ ಜನಪ್ರಿಯವಾಗಿತ್ತು.
ಅಮೆರಿಕದ ಮೇರಿಲ್ಯಾಂಡ್‌ನ ರಾಕ್‌ವಿಲ್‌ನ ಆಸ್ಪತ್ರೆಯೊಂದರಲ್ಲಿ ಅವರು ಸೋಮವಾರ ಕೊನೆಯುಸಿರೆಳೆದರು.
ಗಯಾನ, ಅಮೆರಿಕ ಮತ್ತು ಬ್ರಿಟನ್‌ಗಳಲ್ಲಿ ಶಿಕ್ಷಣ ಪಡೆದ ಅವರು ಹಲವು ಕಾದಂಬರಿಗಳು ಮತ್ತು ಇತರ ಪುಸ್ತಕಗಳನ್ನು ಬರೆದಿದ್ದಾರೆ.
ಅವರು 1960ರ ದಶಕದಲ್ಲಿ ಹೊಸದಾಗಿ ಸ್ವಾತಂತ್ರ ಪಡೆದ ಗಯಾನದ ಮೊದಲ ರಾಯಭಾರಿಯಾಗಿ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ಬಳಿಕ ಅವರು ವೆನೆಝುವೆಲಕ್ಕೆ ರಾಯಭಾರಿಯಾಗಿದ್ದರು.
ಅವರ ಮೊದಲ ಹಾಗೂ ಅತ್ಯಂತ ಪ್ರಸಿದ್ಧ ಪುಸ್ತಕ ‘ಟು ಸರ್, ವಿದ್ ಲವ್’ 1959ರಲ್ಲಿ ಪ್ರಕಟಗೊಂಡಿತು.