ಶಶಿಕಲಾ ನಟರಾಜನ್ ಎಐಎಡಿಎಂಕೆಯ ಮುಂದಿನ ಪ್ರಧಾನ ಕಾರ್ಯದರ್ಶಿ ?
ಚೆನ್ನೈ, ಡಿ.15: ಮಾಜಿ ಮುಖ್ಯ ಮಂತಿ ಜಯಲಲಿತಾ ಅವರ ಸ್ನೇಹಿತೆ ವಿ.ಕೆ.ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆಯ ಮುಂದಿನ ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ.
ಚಿನ್ನಮ್ಮ ಅವರು ಅಮ್ಮ ನಿಧನವಾಗಿರುವ ಎಐಎಡಿಂಕೆಯ ಮುಂದಿನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳಲಿದ್ದಾರೆಂದು ಪಕ್ಷದ ವಕ್ತಾರ ಸಿ. ಪೊನ್ನಯ್ಯನ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಶಶಿಕಲಾ ಅವರು ಈ ತನಕ ಪಕ್ಷದಲ್ಲಿ ಯಾವುದೇ ಸ್ಥಾನ ಮಾನ ಹೊಂದಿಲ್ಲ. ಅವರು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾದರೆ ಮುಂದೆ ಹಲವು ಬದಲಾವಣೆ ನೋಡಲು ಸಾಧ್ಯ. ಶಶಿಕಲಾ ಸೇರಿದಂತೆ ಕೆಲವು ಮಂದಿ ಧುರೀಣರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ಆದರೆ ಶಶಿಕಲಾ ಅವರು ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿಯಾಗುವ ಬಗ್ಗೆ ಏನನ್ನು ಹೇಳಿಲ್ಲ. ಜಯಲಲಿತಾ ಮುಖ್ಯ ಮಂತ್ರಿಯಾಗಿದ್ದಾಗ ಮುಖ್ಯ ಮಂತ್ರಿ ಹಾಗೂ ಪಕ್ಷದ ಪ್ರಮುಖ ಹುದ್ದೆಯನ್ನು ತನ್ನಲ್ಲೆ ಇಟ್ಟುಕೊಂಡಿದ್ದರು. ಆದರೆ ಇದೀಗ ಮುಖ್ಯ ಮಂತ್ರಿ ಹುದ್ದೆಯನ್ನು ಒ.ಪನ್ನೀರ್‌ಸೆಲ್ವಮ್ ವಹಿಸಿಕೊಂಡಿದ್ದಾರೆ. ಆದರೆ ಪಕ್ಷದ ಪ್ರಧಾನ ಹುದ್ದೆ ಖಾಲಿಯಾಗಿದೆ.
,,,,,,,,,,,,,,,,