×
Ad

"ಕೇವಲ ಶ್ರೀಮಂತರಿಗೆ ಮಾತ್ರ ಕಷ್ಟ ಎಂದವರು ಹೇಳಿದ್ರು"

Update: 2016-12-15 15:07 IST

ನೋಟು ರದ್ದತಿಯ ಬಳಿಕ ಜನರು ಬ್ಯಾಂಕುಗಳು,ಎಟಿಎಂ ಮತ್ತು ಇತರ ಕಡೆಗಳಲ್ಲಿ ಹಣವನ್ನು ಪಡೆಯಲು ಉದ್ದನೆಯ ಸರದಿ ಸಾಲುಗಲ್ಲಿ ನಿಂತು ಹೈರಾಣಾಗುತ್ತಿದ್ದಾರೆ. ಶ್ರೀಮಂತರು ಮತ್ತು ಪ್ರಭಾವಿ ವ್ಯಕ್ತಿಗಳು ಹೇಗೋ ಮಾಡಿ ಸರದಿ ಸಾಲಿನಲ್ಲಿ ನಿಲ್ಲುವ ಕಷ್ಟಗಳಿಂದ ಪಾರಾಗಿದ್ದರೆ ಬಡವರು ಮಾತ್ರ ಹಣಕ್ಕಾಗಿ ಪದಾಡುತ್ತಿದ್ದಾರೆ.

ಗುರ್ಗಾಂವ್‌ನ ಬ್ಯಾಂಕಿನ ಹೊರಗೆ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದ ವೃದ್ಧನೋರ್ವ ಒಂದರೆಕ್ಷಣ ಆಚೆಗೆ ಹೋಗಿ ಬರುವಷ್ಟರಲ್ಲಿ ಸಾಲಿನಲ್ಲಿಯ ತನ್ನ ಸ್ಥಾನವನ್ನು ಕಳೆದುಕೊಂಡಿದ್ದ ಮತ್ತು ಅದಾಗಲೇ ಸಾಲು ಇನ್ನಷ್ಟು ಬೆಳೆದಿತ್ತು. ಇದರಿಂದ ಕಂಗಾಲಾದ ವೃದ್ಧ ಜೋರಾಗಿ ಅಳುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಚಿತ್ರ ದೇಶಾದ್ಯಂತ ಜನರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಷ್ಟ ನಿದರ್ಶನವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು, 50 ದಿನಗಳ ಕಾಲ ಕಷ್ಟಗಳನ್ನು ಸಹಿಸಿಕೊಳ್ಳಿ, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಹೋದಲ್ಲಿ ಬಂದಲ್ಲಿ ಜನರಿಗೆ ಹೇಳುತ್ತಿದ್ದಾರೆ. ಆದರೆ ಇಂತಹ ಚಿತ್ರಗಳು ಮಾತ್ರ ನಮ್ಮ ಹೃದಯಗಳಲ್ಲಿ ಅಚ್ಚೊತ್ತಿಕೊಂಡು ಉಳಿಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News