×
Ad

‘‘ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ’ : ಅಡ್ವಾಣಿ ಬಾಂಬ್

Update: 2016-12-15 15:20 IST

ಹೊಸದಿಲ್ಲಿ,ಡಿ.15: ಸಂಸತ್ತಿನ ಕಲಾಪಗಳಿಗೆ ವ್ಯತ್ಯಯವುಂಟಾಗುತ್ತಿರುವುದು ತುಂಬ ನಿರಾಶೆಯನ್ನು ಮೂಡಿಸಿದೆ, ತನ್ನ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಸಂಸದ ಎಲ್.ಕೆ.ಅಡ್ವಾಣಿ ಅವರು ಇಂದಿಲ್ಲಿ ನೋವು ವ್ಯಕ್ತಪಡಿಸಿದರು.

ತಾನು ಅವರನ್ನು ಆರೋಗ್ಯದ ಬಗ್ಗೆ ವಿಚಾರಿಸಿದೆ.‘‘ನನ್ನ ಆರೋಗ್ಯ ಚೆನ್ನಾಗಿದೆ,ಆದರೆ ಸಂಸತ್ತಿನ ಆರೋಗ್ಯ ಕೆಟ್ಟಿದೆ ’’ ಎಂದು ಅವರು ಉತ್ತರಿಸಿದರು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಇದ್ರಿಸ್ ಅಲಿ ಅವರು ಅಡ್ವಾಣಿಯವರನ್ನು ಉಲ್ಲೇಖಿಸಿ ಹೇಳಿದರು.

 ಗುರುವಾರ ನೋಟು ರದ್ದತಿ ಕುರಿತು ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆ ಲೋಕಸಭೆಯು ಮತ್ತೆ ಮುಂದೂಡಿಕೆಯಾದ ಬಳಿಕ ಅಡ್ವಾಣಿಯವರ ಸಿಟ್ಟು ಸ್ಫೋಟಗೊಂಡಿತು.

ಕಳೆದ ವಾರವೂ ಸಂಸತ್ ಕಲಾಪಗಳಿಗೆ ವ್ಯತ್ಯಯದಿಂದ ಕನಲಿದ್ದ ಅಡ್ವಾಣಿ, ಸದನವನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಮತ್ತು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News