×
Ad

ಸೇನಾಧಿಕಾರಿಣಿಯ ಆತ್ಮಹತ್ಯೆ

Update: 2016-12-16 23:59 IST

ಜಮ್ಮು, ಡಿ.16: ಇಲ್ಲಿನ ಭೂಸೇನಾ ಘಟಕವೊಂದರಲ್ಲಿ ಸೇನಾಧಿಕಾರಿಣಿಯೊಬ್ಬರು ತನ್ನ ಸರ್ವಿಸ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಮೇಜರ್ ಅನಿತಾ ಕುಮಾರಿ(36) ಎಂಬವರು ತನ್ನ ಕೋಣೆಯಲ್ಲಿ ತಲೆಗೆ ಗುಂಡಿನ ಗಾಯಗಳೊಂದಿಗೆ ಶವವಾಗಿ ನಿನ್ನೆ ರಾತ್ರಿ ಪತ್ತೆಯಾಗಿದ್ದರು. ಬರಿ ಬ್ರಹಮಾನ ಪ್ರದೇಶದ ಸೇನಾ ಘಟಕದಲ್ಲಿ ಅವರು ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ.
ಶವ ಪರೀಕ್ಷೆ ನಡೆಯುತ್ತಿದ್ದು, ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಗಾಗಿ ವಿಧಿವಿಜ್ಞಾನಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ, ಘಟನೆಯ ಕುರಿತು ಸೇನಾ ವಿಚಾರಣೆಗೆ ಭೂಸೇನೆ ಆದೇಶಿಸಿದೆ. ಹಿಮಾಚಲಪ್ರದೇಶದವರಾಗಿದ್ದ ಅನಿತಾ, ಆರ್ಮಿ ಸರ್ವಿಸ್ ಕಾರ್ಪ್‌ಗೆ ಸೇರಿದವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News