×
Ad

ಇನ್ನು ವಿಮಾನ ನಿಲ್ದಾಣ ಪ್ರವೇಶಿಸಲು ಐಡಿ ಕಾರ್ಡು ಬೇಡ

Update: 2016-12-17 15:45 IST

ಹೊಸದಿಲ್ಲಿ, ಡಿ.17: ಇನ್ನು ಮುಂದೆ ವಿಮಾನ ನಿಲ್ದಾಣ ಪ್ರವೇಶಿಸಬೇಕೆಂದಾದರೆ ನಿಮ್ಮ ಹೆಬ್ಬೆರಳಿಗಿಂತ ಹೆಚ್ಚಿನ ದಾಖಲೆಗಳು ಬೇಕಾಗಿಲ್ಲದೇ ಇರಬಹುದು. ನಾಗರಿಕ ವಿಮಾನಯಾನ ಇಲಾಖೆಯು ವಿಮಾನ ನಿಲ್ದಾಣಗಳಿಗೆ ಪ್ರವೇಶಿಸಲು ಬಯೋಮೆಟ್ರಿಕ್ ಐಡೆಂಟಿಫಿಕೇಶನ್ ಉಪಯೋಗಿಸುವ ಕುರಿತು ಯೋಚಿಸುತ್ತಿದ್ದು, ಈ ಬಗ್ಗೆ ಈಗಾಗಲೇ ಪೈಲಟ್ ಯೋಜನೆಯೊಂದನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಪೂರೈಸಲಾಗಿದೆ. ಬ್ಯುರೋ ಆಫ್ ಸಿವಿಲ್ ಏವ್ಯೇಶನ್ ಸೆಕ್ಯುರಿಟಿ ಈ ಪೈಲಟ್ ಯೋಜನೆಯನ್ನು ಕಾರ್ಯಗತಗೊಳಿಸಿತ್ತು ಎಂದು ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷ ಗುರುಪ್ರಸಾದ್ ಮಹಾಪಾತ್ರ ಹೇಳಿದ್ದಾರೆ.

ಈಗಾಗಲೇ ನೂರು ಕೋಟಿಯಷ್ಟು ಆಧಾರ್ ಕಾರ್ಡುಗಳನ್ನು ವಿತರಿಸಲಾಗಿರುವುದರಿಂದ ಹಾಗೂ ಈ ಕಾರ್ಡುಗಳಲ್ಲಿ ಸಂಬಂಧಿತರ ಬಯೋಮೆಟ್ರಿಕ್ಸ್, ಫಿಂಗರ್ ಪ್ರಿಂಟ್ಸ್ ಮತ್ತು ಐರಿಸ್ ಸ್ಕ್ಯಾನ್ ಇರುವುದರಿಂದವಿಮಾನ ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡುವಾಗ ಆಧಾರ್ ಸಂಖ್ಯೆಯನ್ನೂ ನೀಡುವಂತೆ ಹೇಳಿದರೆ ಪ್ರಯೋಜನವಾದೀತೇ ಎಂದು ತಿಳಿಯುವ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ. ಅದು ಸಾಧ್ಯವಾದಲ್ಲಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೆಬ್ಬೆರಳು ಗುರುತನ್ನು ಬಯೋಮೆಟ್ರಿಕ್ ಐಡೆಂಟಿಫಿಕೇಶನ್ ಗಾಗಿ ಪಡೆದು ವಿಮಾನ ನಿಲ್ದಾಣ ಪ್ರವೇಶಿಸಲು, ವಿಮಾನ ಹತ್ತಲು ಅವಕಾಶ ನೀಡಬಹುದಾಗಿದೆ ಎಂದು ವಿಮಾನಯಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News