ಡಬ್ಲುಬಿಒ ಏಷ್ಯಾ ಪೆಸಿಫಿಕ್ ಪ್ರಶಸ್ತಿ ಉಳಿಸಿಕೊಂಡ ವಿಜೇಂದರ್

Update: 2016-12-17 17:41 GMT

 ಹೊಸದಿಲ್ಲಿ, ಡಿ.17: ತಾಂಜಾನಿಯ ಬಾಕ್ಸರ್ ಫ್ರಾನ್ಸಿಸ್ ಚೇಕಾ ವಿರುದ್ಧ ಟೆಕ್ನಿಕಲ್ ನಾಕೌಟ್(ಟಿಕೆಒ) ಮೂಲಕ ಗೆಲುವು ಸಾಧಿಸಿದ ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಡಬ್ಲುಬಿಒ ಏಷ್ಯಾ ಪೆಸಿಫಿಕ್ ಸೂಪರ್-ಮಿಡ್ಲ್‌ವೇಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

 ಇಲ್ಲಿನ ತ್ಯಾಗರಾಜ್ ಸ್ಟೇಡಿಯಂನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಶನಿವಾರ ರಾತ್ರಿ ನಡೆದ ಬಹು ನಿರೀಕ್ಷಿತ 10 ಸುತ್ತಿನ ಬಾಕ್ಸಿಂಗ್ ಸ್ಪರ್ಧೆ ಮೂರನೆ ಸುತ್ತಿನಲ್ಲಿ ಕೊನೆಗೊಂಡಿತು. 3ನೆ ಸುತ್ತಿನ ಬಳಿಕ ರೆಫರಿ ಸ್ಪರ್ಧೆಯನ್ನು ನಿಲ್ಲಿಸಿದರು. ಟಿಕೆಒ ಮೂಲಕ ವಿಜೇಂದರ್ ಜಯ ಸಾಧಿಸಿದರು. ಈ ಮೂಲಕ 2008ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ವಿಜೇಂದರ್ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಸತತ 8ನೆ ಗೆಲುವು ಸಾಧಿಸಿದರು.

3ನೆ ಸುತ್ತಿನಲ್ಲಿ ವಿಜೇಂದರ್ ಜಯಶಾಲಿಯಾದಾಗ ಸ್ಟೇಡಿಯನಲ್ಲಿ ನೆರೆದಿದ್ದ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ಪಂದ್ಯವನ್ನು ಕುಸ್ತಿಪಟು ಸುಶೀಲ್ ಕುಮಾರ್, ಬಾಕ್ಸಿಂಗ್ ತಾರೆ ಮೇರಿಕೋಮ್ ಹಾಗೂ ಬಾಬಾ ರಾಮ್‌ದೇವ್ ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News