ಅಲೆಪ್ಪೊ: ಗಂಭೀರ ಸ್ಥಿತಿಯಲ್ಲಿ 47 ಮಕ್ಕಳ ಸ್ಥಳಾಂತರ
Update: 2016-12-19 21:19 IST
ಜಿನೇವ, ಡಿ. 19: ಸಿರಿಯದ ನಗರ ಅಲೆಪ್ಪೊದ ಪೂರ್ವ ಭಾಗದ ಬಂಡುಕೋರ ನಿಯಂತ್ರಣದಲ್ಲಿದ್ದ ಅನಾಥಾಲಯದಲ್ಲಿ ಸಿಕ್ಕಿಹಾಕಿಕೊಂಡಿದ್ದ 47 ಮಕ್ಕಳನ್ನು ಸೋಮವಾರ ತೆರವುಗೊಳಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಹೇಳಿದೆ.
‘‘ಇಂದು ಬೆಳಗ್ಗೆ ಪೂರ್ವ ಅಲೆಪ್ಪೊದ ಅನಾಥಾಲಯವೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಎಲ್ಲ 47 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಅವರ ಪೈಕಿ ಕೆಲವರು ಗಾಯ ಮತ್ತು ಬಾಯಾರಿಕೆಯಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ’’ ಎಂದು ಯುನಿಸೆಫ್ ಪ್ರಾದೇಶಿಕ ನಿರ್ದೇಶಕ ಗೀರ್ಟ್ ಕ್ಯಾಪಲೇರ್ ಹೇಳಿಕೆಯೊಂದರಲ್ಲಿ ತಿಳಿಸಿದರು.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.