×
Ad

ಜಿಷಾ ಕೊಲೆಪ್ರಕರಣ: ತಂದೆಯ ಸಿಬಿಐ ತನಿಖೆ ಅರ್ಜಿ ಹೈಕೋರ್ಟಿನಿಂದ ವಜಾ

Update: 2016-12-22 15:44 IST

ಕೊಚ್ಚಿ,ಡಿ.22: ಜಿಷಾ ಕೊಲೆಪ್ರಕರಣವನ್ನುಸಿಬಿಐ ತನಿಖೆ ಗೊಪ್ಪಿಸಬೇಕೆಂದು ತಂದೆ ಪಾಪ್ಪು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟು ತಳ್ಳಿಹಾಕಿದೆ. ತನಿಖಾ ಹಂತದಲ್ಲಿ ಅರ್ಜಿದಾರ ತನಿಖಾಧಿಕಾರಿಗಳ ಮುಂದೆ ಈ ಬೇಡಿಕೆ ಇಟ್ಟಿಲ್ಲ, ಸಿಬಿಐ ತನಿಖೆಗೆ ವಹಿಸಿ ಕೊಡಲು ಪೂರಕವಾದ ಸಾಕ್ಷ್ಯಗಳನ್ನು ಅರ್ಜಿದಾರ ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟಿನ ಏಕಸದಸ್ಯ ಪೀಠ ಸಿಬಿಐ ಮೂಲಕ ಮರುತನಿಖೆಗೆ ಆಗ್ರಹಿಸಿದ ಅರ್ಜಿಯನ್ನು ವಜಾಗೊಳಿಸಿದೆಎಂದು ವರದಿಯಾಗಿದೆ.

ಜಿಷಾ ಪ್ರಕರಣವನ್ನು ಸಿಬಿಐಗೆ ವಹಿಸುವುದನ್ನು ಬೆಂಬಲಿಸಿ ರೀಟಾ ಬಾಲಚಂದ್ರನ್ ಸಹಿತ ನಾಲ್ವರು ಜಿಷಾ ಸಹಪಾಠಿಗಳು ಸಲ್ಲಿಸಿದ ಅರ್ಜಿಯನ್ನು ಸಹಾ ಹೈಕೋರ್ಟು ತಳ್ಳಿಹಾಕಿದೆ. ಆದರೆ, ವಿಚಾರಣೆ ಕೋರ್ಟಿನಲ್ಲಿ ಜಿಷಾ ಮೃತಪಟ್ಟ ಸಮಯದ ಕುರಿತ ಅಸ್ಪಷ್ಟತೆ ಇತ್ಯಾದಿ ಆರೋಪಗಳನ್ನು ಪ್ರಸ್ತಾಪಿಸಬಹುದು ಎಂದು ಹೈಕೋರ್ಟು ಅರ್ಜಿದಾರರಿಗೆತಿಳಿಸಿದೆ. ಕಾನೂನು ವಿದ್ಯಾರ್ಥಿನಿ ಜಿಷಾ ಎಪ್ರಿಲ್ 28ರಂದು ಪೆರಂಬಾವೂರಿನ ತನ್ನ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಕಂಡು ಬಂದಿದ್ದರು.

ನಂತರ ಈಪ್ರಕರಣದಲ್ಲಿ ಅಸ್ಸಾಂನ ಅಮೀರುಲ್ ಇಸ್ಲಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಜಿಷಾ ತಂದೆ ಹಲವಾರು ಪ್ರಶ್ನೆಗಳಿಗೆ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉತ್ತರವಿಲ್ಲ ಎಂದು ವಾದ ಮಂಡಿಸಿದ್ದರು. ಸರಕಾರ ಜಿಷಾ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂದು ಡಿಜಿಪಿ ಸೆನ್‌ಕುಮಾರ್ ವಿರುದ್ಧ ಕ್ರಮಕೈಗೊಂಡಿದ್ದನ್ನು ಸಹಾ ಪಾಪ್ಪು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಈ ಹಂತದಲ್ಲಿ ಇಂತಹದೊಂದು ವಾದ ಅಪ್ರಸಕ್ತ ಎಂದು ಕೋರ್ಟು ಅಭಿಪ್ರಾಯಪಟ್ಟಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News