9 ಕ್ರೀಡಾಪಟುಗಳು ಡಿವೈಎಸ್‌ಪಿ ಅಗಿ ನೇಮಕ
ಹೊಸದಿಲ್ಲಿ, ಡಿ.26: ಆರು ಹಾಕಿ ಆಟಗಾರರು ಸೇರಿದಂತೆ 9 ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‌ಪಿ ಆಗಿ ನೇಮಕಗೊಂಡಿದ್ದಾರೆ.
2014ರ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಹಾಕಿ ತಂಡದ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್, ಫಾವರ್ಡ್ ಆಕಾಶ್‌ದೀಪ್ ಸಿಂಗ್, ಸರ್ವಂಜಿತ್ ಸಿಂಗ್, ರಮಣ್‌ದೀಪ್ ಸಿಂಗ್, ಗುರ್‌ವೇಂದರ್ ಸಿಂಗ್ ಚಾಂಡಿ ಮತ್ತು ಧರಮ್‌ವೀರ್ ಸಿಂಗ್ ಅವರು ಪೊಲೀಸ್ ಉಪ ಅಧೀಕ್ಷಕರಾಗಿ ನೇಮಕಗೊಂಡಿದ್ದಾರೆ.
ಮನ್‌ಪ್ರೀತ್ ಸಿಂಗ್ ಮತ್ತು ಆಕಾಶ್‌ದೀಪ್ ಸಿಂಗ್ ಅವರು ಲಂಡನ್‌ನಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಳ್ಳಿ ಮತ್ತು 2016ರ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದೇ ವೇಳೆ ಮೂರು ಬಾರಿ ಏಶ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ಪಡೆದ ಮನ್‌ದೀಪ್ ಕೌರ್, ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪಡೆದ ಅಥ್ಲೀಟ್ ಕುಶ್ಬೀರ್ ಕೌರ್ ಮತ್ತು ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಪಡೆದ ಅಥ್ಲೀಟ್ ಅಮನ್‌ದೀಪ್ ಕೌರ್ ಡಿವೈಎಸ್‌ಪಿ ಆಗಿ ನೇಮಕಗೊಂಡಿದ್ದಾರೆ.