×
Ad

ಇನಿಯೆಸ್ತಾ ಬಾರ್ಸಿಲೋನಾದಲ್ಲಿ ಒಪ್ಪಂದ ಮುಂದುವರಿಸಲು ಆಸಕ್ತಿ

Update: 2016-12-26 23:41 IST

ಮ್ಯಾಡ್ರಿಡ್, ಡಿ. 26: ಬಾರ್ಸಿಲೋನಾ ತಂಡದ ನಾಯಕ ಆ್ಯಂಡ್ರೆಸ್ ಇನಿಯೆಸ್ತ ಅವರು ಬಾರ್ಸಿಲೋನಾ ತಂಡದಲ್ಲಿ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲು ಬಯಸಿರುವುದಾಗಿ ಹೇಳಿದ್ದಾರೆ.
ಇನಿಯೆಸ್ತ ಮಾಡಿಕೊಂಡಿರುವ ಒಪ್ಪಂದ 2018ರಲ್ಲಿ ಕೊನೆಗೊಳ್ಳುತ್ತದೆ. ಆದರೆ ಅವರು ಒಪ್ಪಂದವನ್ನು ಮುಂದುವರಿಸಉವ ಇಚ್ಛೆ ವ್ಯಕ್ತಪಡಿಸಿದ್ದಾರೆ.
   ‘‘32ರ ಹರೆಯದ ಇನಿಯೆಸ್ತ ಕ್ರೀಡಾ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾನು ಒಪ್ಪಂದ ಮುಂದುವರಿಸುವ ವಿಚಾರ ಜಗತ್ತಿಗೆ ಗೊತ್ತಿದೆ. ಆದರೆ ನೀಡುತ್ತಿರುವ ಪ್ರದರ್ಶನ ತನ್ನ ಭವಿಷ್ಯವನ್ನು ನಿರ್ಧರಿಸಲಿದೆ. ನಾನು ದೀರ್ಘ ಕಾಲ ತಂಡದಲ್ಲಿ ಮುಂದುವರಿಯುವ ಬಗ್ಗೆ ಆಶಿಸುತ್ತೇನೆ ’’ ಎಂದು ಹೇಳಿದರು.
ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸುಯೆರೆಝ್ ಜೂನ್ 2021ರ ತನಕ ಒಪ್ಪಂದ ವನ್ನು ಮುಂದುವರಿಸಿದ್ದಾರೆ. ಅವರ ಹಿಂದಿನ ಒಪ್ಪಂದ 2019ರಲ್ಲಿ ಕೊನೆಗೊಳ್ಳುದಿತ್ತು.
ಕಳೆದ ಅಕ್ಟೋಬರ್‌ನಲ್ಲಿ ಬ್ರೆಝಿಲ್‌ನ ಸೂಪರ್ ಸ್ಟಾರ್ ನೇಮಾರ್ 2021ರ ತನಕ ಒಪ್ಪಂದವನ್ನು ಮುಂದುವರಿಸಿದ್ದರು.
ಲಿಯೊನೆಲ್ ಮೆಸ್ಸಿ ಹೊಸ ಒಪ್ಪಂದದ ಬಗ್ಗೆ ಮಾತುಕತೆ ಆರಂಭಿಸಿದ್ದಾರೆ.
  ಮೆಸ್ಸಿ ಅವರ ಜತೆ ಇನಿಯೆಸ್ತ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡವರು. 2010ರ ವಿಶ್ವಕಪ್‌ನ ಫೈನಲ್‌ನಲ್ಲಿ ಹಾಲೆಂಡ್ ವಿರುದ್ಧ ಸ್ಪೇನ್ ಪರ ವಿಜಯದ ಗೋಲು ದಾಖಲಿಸಿದವರು. ಜೇವಿ ಹೆರ್ನಾಂಡೆಝ್ ಅವರ ಬಳಿಕ ಬಾರ್ಸಿಲೋನಾ ತಂಡದಲ್ಲಿ ಗರಿಷ್ಠ ಪಂದ್ಯಗಳನ್ನು ಆಡಿದವರು ಇನಿಯೆಸ್ತ. ಬಾರ್ಸಿಲೋನಾದ ಕೋಚ್ ಲೂಯಿಸ್ ಎನ್ರಿಕ್ ತಮಗೆ ಒಪ್ಪಂದವನ್ನು ಮುಂದುವರಿಸಲು ಅವಕಾಶ ನೀಡಿಯಾರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News