ದಿಲ್ಲಿ-ಎನ್‌ಸಿಆರ್‌ನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಆನ್‌ಲೈನ್ ಖರೀದಿದಾರರು
Update: 2016-12-26 23:59 IST
ಹೊಸದಿಲ್ಲಿ,ಡಿ.26: 2016ನೆ ಸಾಲಿನಲ್ಲಿ ತನ್ನ ಗ್ರಾಹಕರಲ್ಲಿ ದಿಲ್ಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್) ದ ಜನರು ಅಗ್ರಸ್ಥಾನದಲ್ಲಿದ್ದಾರೆ ಎಂದು ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಫ್‌ಕಾರ್ಟ್ ಹೇಳಿದೆ.
ನಮ್ಮ ಅತ್ಯಂತ ಹೆಚ್ಚಿನ ಗ್ರಾಹಕರು ರಾಷ್ಟ್ರ ರಾಜಧಾನಿಗೆ ಸೇರಿದವರಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ಬೆಂಗಳೂರು,ಮುಂಬೈ,ಚೆನ್ನೈ ಮತ್ತು ಹೈದರಾಬಾದ್‌ಗಳ ಗ್ರಾಹಕರಿದ್ದಾರೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ. ದೇಶದ ಮೂರನೆ ಸ್ತರದ ನಗರಗಳಲ್ಲಿ ವೆಲ್ಲೂರು, ತಿರುಪತಿ, ಬಳ್ಳಾರಿ, ಜೋರ್ಹಟ್ ಮತ್ತು ಕೊಟ್ಟಾಯಂ ಮೊದಲ ಐದು ಸ್ಥಾನಗಳಲ್ಲಿವೆ. 2016ರಲ್ಲಿ ಆನ್‌ಲೈನ್ ಶಾಪರ್‌ಗಳಲ್ಲಿ ಶೇ.60ರಷ್ಟು ಪುರುಷರಾಗಿದ್ದು, ಇಲೆಕ್ಟ್ರಾನಿಕ್ಸ್, ಪರ್ಸನಲ್ ಆಡಿಯೊ, ಫುಟ್‌ವೇರ್ ಮತ್ತು ಲೈಫ್‌ಸ್ಟೈಲ್ ಪ್ರಾಡಕ್ಟ್‌ಗಳಲ್ಲಿ ಹೆಚ್ಚಿನ ಖರೀದಿಗಳನ್ನು ಮಾಡಿದ್ದಾರೆ.