×
Ad

ಸ್ನ್ಯಾಪ್‌ಡೀಲ್‌ನಿಂದ ಆಮಿರ್‌ಖಾನ್ ಕೈಬಿಡುವಂತೆ ಬಿಜೆಪಿಯಿಂದಲೇ ಒತ್ತಡ ನಿರ್ಮಾಣ!

Update: 2016-12-27 09:40 IST

ಮುಂಬೈ, ಡಿ.27: ದೇಶದ ಪ್ರಮುಖ ಇ-ವಾಣಿಜ್ಯ ಪ್ಲಾಟ್‌ಫಾರಂ ಸ್ನ್ಯಾಪ್‌ಡೀಲ್ ಪ್ರಚಾರ ರಾಯಭಾರಿಯಾಗಿರುವ ಆಮಿರ್‌ಖಾನ್ ಅವರನ್ನು ಕೈಬಿಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಒತ್ತಡ ತರುವಂತೆ ಬಿಜೆಪಿ ಐಟಿ ಕೋಶ ಸೂಚನೆ ನೀಡಿತ್ತು ಎಂಬ ಅಂಶ ಇದೀಗ ಬಹಿರಂಗವಾಗಿದೆ. 2015ರ ನವೆಂಬರ್‌ನಲ್ಲಿ ಅವರು ಸರಕಾರವನ್ನು ಟೀಕಿಸಿದ ಹಿನ್ನೆಲೆಯಲ್ಲಿ ಈ ಒತ್ತಡ ಹೇರಲಾಗಿತ್ತು ಎಂದು, ಸಾಮಾಜಿಕ ಜಾಲತಾಣ ತಂಡದ ಮಾಜಿ ಸ್ವಯಂಸೇವಕ ಇನ್ನೂ ಬಿಡುಗಡೆಯಾಗಬೇಕಿರುವ ಪುಸ್ತಕದಲ್ಲಿ ಹೇಳಿದ್ದಾರೆ.

ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದಿಂದ ಹೊರಬಂದಿರುವ ಸಾಧ್ವಿ ಕೋಸ್ಲಾ ತಮಗೆ ಹಾಗೂ ಪತ್ರಕರ್ತೆ ಸ್ವಾತಿ ಚತುರ್ವೇದಿಯವರಿಗೆ ಕಳುಹಿಸಿರುವ ವಾಟ್ಸ್ ಆ್ಯಪ್ ಸಂದೇಶವನ್ನು ಬಹಿರಂಗಪಡಿಸಿದ್ದು, ಅವರ ಕೃತಿ 'ಐ ಆ್ಯಮ್ ಎ ಟ್ರಾಲ್' ಬಿಡುಗಡೆಗೆ ಸಿದ್ಧವಾಗಿದೆ.

2015ರ ನವೆಂಬರ್ 23ರಂದು ನಡೆದ ರಾಮನಾಥ್ ಗೊಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಸಮಾರಂಭದಲ್ಲಿ ಆಮಿರ್‌ಖಾನ್ ಅವರು, ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದರು. "ನಾನು ಹಾಗೂ ಪತ್ನಿ ಕಿರಣ್ ರಾವ್ ಭಾರತದಲ್ಲೇ ಹುಟ್ಟಿ ಬೆಳೆದವರು. ಮೊಟ್ಟಮೊದಲ ಬಾರಿಗೆ ನಾವು ಭಾರತದಿಂದ ಹೊರಹೋಗಬೇಕೇ ಎಂಬ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದೇವೆ" ಎಂದು ಆಮಿರ್‌ಖಾನ್ ಹೇಳಿದ್ದರು.

ಈ ಹೇಳಿಕೆ ಬಳಿಕ ಬಿಜೆಪಿ ಸಾಮಾಜಿಕ ಜಾಲತಾಣ ಘಟಕವು ಖಾನ್ ವಿರುದ್ಧ ಆಂದೋಲನ ಆಯೋಜಿಸಿತು ಎಂದು ಖೋಸ್ಲಾ ಬಹಿರಂಗಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News