ಕೇರಳ: ಪೊಲೀಸರಿಗೆ ಯೋಗ ಕಡ್ಡಾಯ
Update: 2016-12-27 13:17 IST
ಕೋಟ್ಟಯಂ,ಡಿ.27: ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಯೋಗವನ್ನು ಮಂಗಳವಾರದಿಂದ ಕಡ್ಡಾಯ ಗೊಳಿಸಲಾಗುತ್ತಿದೆ. ಪೊಲೀಸ್ ಮುಖ್ಯಸ್ಥರ ನಿರ್ದೇಶದಂತೆ ಸಂಬಂಧಿಸಿದ ಸುತ್ತೋಲೆ ಎಲ್ಲ ಠಾಣೆಗಳಿಗೂ ಕಳುಹಿಸಲಾಗಿದೆ.
ಮೊದಲು ನೀಡಿದ್ದ ನಿರ್ದೇಶ ಪ್ರಕಾರ ಜನವರಿ ಒಂದರಿಂದ ಠಾಣೆಯಲ್ಲಿ ಕಡ್ಡಾಯ ಯೋಗ ಎನ್ನಲಾಗಿತ್ತು. ಇದನ್ನು ಬದಲಿಸಿ ಎಸ್ಸೈಗಳು ಪೊಲೀಸರಿಗೆ ಮಂಗಳವಾರದಿಂದ ಯೋಗ ಆರಂಭಿಸಬೇಕೆಂದು ನಿರ್ದೇಶ ನೀಡಿದ್ದಾರೆ. ಬಹುತೇಕ ಕಡೆಗಳಲ್ಲಿ ಆದೇಶವನ್ನು ಸುತ್ತೋಲೆಗಳಲ್ಲಿ ಕಳುಹಿಸಲಾಗಿದ್ದು, ಪೊಲೀಸರ ಆರೋಗ್ಯ, ಮನಸ್ಸು ಶರೀರ ಆರೋಗ್ಯ, ಆತ್ಮಸಂಯಮಕ್ಕಾಗಿ ಯೋಗ ಮಾಡಲು ನಿರ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆಂದು ವರದಿತಿಳಿಸಿದೆ.