ಕಾಮನ್‌ವೆಲ್ತ್ ಕಳಂಕ ಹೊತ್ತ ಕಲ್ಮಾಡಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‌ಗೆ ಅಜೀವ ಅಧ್ಯಕ್ಷ!

Update: 2016-12-28 03:34 GMT

ಹೊಸದಿಲ್ಲಿ, ಡಿ.28: ಕಾಮನ್‌ವೆಲ್ತ್ ಕ್ರೀಡಾಕೂಟ ಅವ್ಯವಹಾರದ ಕಳಂಕ ಹೊತ್ತಿರುವ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಚೌತಾಲಾ ಅವರನ್ನು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‌ಗೆ ಆಜೀವ ಅಧ್ಯಕ್ಷರಾಗಿ ಮಂಗಳವಾರ ನೇಮಕ ಮಾಡಲಾಗಿದೆ.

2010ರಲ್ಲಿ ದಿಲ್ಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರಿ ಅವ್ಯವಹಾರ ಎಸಗಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನನ ಮೇಲೆ ಬಿಡುಗಡೆಯಾಗಿದ್ದ ಇವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು, "ಆಘಾತವಾಗಿದೆ. ಈ ನೇಮಕದ ಬಗ್ಗೆ ವರದಿ ಕೇಳಲಾಗುವುದು. ಕಲ್ಮಾಡಿ ಹಾಗೂ ಚೌತಾಲಾ ಅವರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಈ ಹಗರಣ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ವ್ಯಾಪಕ ಪ್ರಚಾರ ಪಡೆದಿತ್ತು. ಕ್ರೀಡಾಗ್ರಾಮದಲ್ಲಿ ಕ್ರೀಡಾಪಟುಗಳಿಗೆ ನೀಡಿದ ಸೌಲಭ್ಯಗಳು ಅಸಮರ್ಪಕವಾಗಿದ್ದ ಹಿನ್ನೆಲೆಯಲ್ಲಿ ಕ್ರೀಡಾಕೂಟದ ಅವ್ಯವಸ್ಥೆ ಪ್ರಚಾರ ಪಡೆದಿತ್ತು. ಸಿಬಿಐ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಕಲ್ಮಾಡಿ ಹಾಗೂ ಇತರರನ್ನು ದೋಷಿಗಳಾಗಿ ಹೆಸರಿಸಿ, 2011ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News