ಡಿ.30: ಸಿಟಿ ಸೆಂಟರ್‌ನಲ್ಲಿ ಅರೆಬಿಯನ್ ಹಾಗೂ ಬಹುವಿಧದ ಖಾದ್ಯಗಳ ‘ಸೇವರಿ ರೆಸ್ಟೋರಂಟ್’ ಉದ್ಘಾಟನೆ

Update: 2016-12-28 10:21 GMT

ಮಂಗಳೂರು, ಡಿ.28: ಮಂಗಳೂರು ಮಹಾನಗರದ ಪ್ರತಿಷ್ಠಿತ ಹೋಟೆಲ್‌ಗಳ ಸರಣಿಗೆ ಮತ್ತೊಂದು ಗರಿಯ ಸೇರ್ಪಡೆಯಾಗುತ್ತಿದೆ. ಅರೆಬಿಕ್ ಶೈಲಿಯ, ತಂದೂರಿ, ಉತ್ತರ ಮತ್ತು ದಕ್ಷಿಣ ಭಾರತೀಯ ಹಾಗು ಚೈನೀಸ್ ಮಾದರಿಯ ಬೆಂಗಳೂರು, ಚೆನ್ನೈಗಳಲ್ಲಿ ಹೆಸರುವಾಸಿಯಾಗಿರುವ ವಿಶಾಲ ರೆಸ್ಟೋರೇಂಟ್ ‘ಸೇವರಿ’ ಡಿ.30ಕ್ಕೆ ಸಿಟಿ ಸೆಂಟರ್‌ನ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

‘ಸೇವರಿ’ಯಲ್ಲಿ ಸ್ವಾಧಿಷ್ಟಕರ ಅರೆಬಿಯನ್ ಖಾದ್ಯಗಳಲ್ಲದೆ ಬಹುವಿಧದ ಅತ್ಯಾಧುನಿಕ ಮಾದರಿಯ ಶುಚಿ-ರುಚಿಯಾದ ಮಾಂಸಾಹಾರ, ಸಸ್ಯಾಹಾರ, ಬೇಕರಿ ಐಟಂ, ತಂಪು ಪಾನೀಯ, ಐಸ್‌ಕ್ರೀಂ, ಜ್ಯೂಸ್ ಇತ್ಯಾದಿಯಾಗಿ ಸುಮಾರು 1 ಸಾವಿರಕ್ಕೂ ಅಧಿಕ ಬಗೆಯ ತಿಂಡಿ-ತಿನಿಸುಗಳು ಲಭ್ಯ ಇವೆ. 

ವಿಶಾಲ ರಸ್ಟೋರೆಂಟ್, ಓಪನ್ ಕಿಚನ್
ಅರೆಬಿಕ್ ಶೈಲಿಯ ತಿಂಡಿ-ತಿನಿಸುಗಳಿಗೆ ಖ್ಯಾತಿ ಪಡೆದಿರುವ ‘ಸೇವರಿ’ಯು ಸುಮಾರು 7 ಸಾವಿರ ಚ.ಅ. ವಿಸ್ತೀರ್ಣ ಹೊಂದಿದೆ. ಇಲ್ಲಿ 200ಕ್ಕೂ ಅಧಿಕ ಮಂದಿ ಏಕಕಾಲಕ್ಕೆ ತಿಂಡಿ-ತಿನಿಸು ತಿನ್ನುವ ಮತ್ತು ಭೋಜನ ಮಾಡುವ ವ್ಯವಸ್ಥೆಯಿದೆ. ಸುಮಾರು 2,100 ಚ.ಅ. ವಿಸ್ತೀರ್ಣವನ್ನು ಅತ್ಯಾಧುನಿಕ ಸೌಲಭ್ಯಗಳುಳ್ಳ ಅಡುಗೆ ಕೋಣೆಗೆ ಮೀಸಲಿಡಲಾಗಿದೆ.

ಅಡುಗೆ ಕೋಣೆಯಲ್ಲೂ ಕೂಡ ಉತ್ತರ ಭಾರತೀಯ, ದಕ್ಷಿಣ ಭಾರತೀಯ ಅದರಲ್ಲೂ ಕೇರಳ ಶೈಲಿಯ ಅಡುಗೆ ತಯಾರಿಯಲ್ಲದೆ ಚೈನೀಸ್, ಅರೆಬಿಕ್ ಶೈಲಿಗೆ ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿದೆ. ‘ಮಟನ್ ಮಂದಿ’ ಎಂಬ ಅರೆಬಿಕ್ ಶೈಲಿಯ ವಿಶೇಷ ಭಕ್ಷತಯಾರಿ ಕೇಂದ್ರವು ಗಮನ ಸೆಳೆಯುತ್ತದೆ. ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತವರಿಗೆ ಅಡುಗೆ ಮನೆಯ ಚಟುವಟಿಕೆಗಳನ್ನು ನೋಡುವ ವಿಶಿಷ್ಟ, ಪಾರದರ್ಶಕ ವ್ಯವಸ್ಥೆ ಇಲ್ಲಿದೆ. ಆಹಾರ ತಯಾರಿ ಮತ್ತು ಪಾತ್ರೆಪಗಡೆಗಳನ್ನು ತೊಳೆಯಲು ಶುದ್ಧೀಕರಿಸಲ್ಪಟ್ಟ (ಮಿನರಲ್) ನೀರನ್ನೇ ಬಳಸಲಾಗುತ್ತದೆ. ಯಾವುದೇ ಕಾರಣಕ್ಕೂ ನಳ್ಳಿ ನೀರನ್ನು ಬಳಸಲಾಗುತ್ತಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಕುಂಞಿ ಮೂಸಾ ತಿಳಿಸಿದ್ದಾರೆ.


ಹವಾನಿಯಂತ್ರಿತ ‘ಸೇವರಿ ರೆಸ್ಟೋರಂಟ್’ಗೆ ಕಲಾತ್ಮಕ ಸ್ಪರ್ಶ ನೀಡಲಾಗಿದೆ. ಕ್ಯಾಶ್‌ಕೌಂಟರ್‌ನಿಂದ ಹಿಡಿದು ಭೋಜನ ವ್ಯವಸ್ಥೆಗೆ ಸಿದ್ಧಪಡಿಸಲಾದ ಟೇಬಲ್-ಚೆಯರ್‌ಗಳು ಕೂಡ ಮರದ ಕೆತ್ತನೆಯಿಂದ ಕೂಡಿದೆ. ಕುಟುಂಬ ವರ್ಗ ಒಮ್ಮೆ ಒಳ ಹೊಕ್ಕರೆ ಮತ್ತೆ ಮತ್ತೆ ಹೋಗುತ್ತಲೇ ಇರಬೇಕು ಎಂಬಂತಹ ಆಹ್ಲಾದಕರ ವಾತಾವರಣ ಇಲ್ಲಿ ಕಂಡು ಬರುತ್ತದೆ. ಅದಕ್ಕೆ ರೂಪುಗೊಂಡ ಒಳಾಂಗಣ ವಿನ್ಯಾಸವೇ ಕಾರಣವಾಗಿದೆ.


ವೈವಿಧ್ಯಮಯ ವಿಶೇಷ ಖಾದ್ಯಗಳು
ಬೆಳಗ್ಗೆ 8ರಿಂದ ರಾತ್ರಿ 11ರವರೆಗೆ ತೆರೆದಿರುವ ‘ಸೇವರಿ ರೆಸ್ಟೋರಂಟ್’ನಲ್ಲಿ ಚಿಕನ್, ಮಟನ್ ಹಾಗೂ ಮೀನಿನ ವೈವಿಧ್ಯಮಯ ಖಾದ್ಯಗಳು ಲಭ್ಯವಿವೆ. ಬೆಳಗ್ಗಿನ ಮತ್ತು ಸಂಜೆ ಫಲಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಬಿರಿಯಾನಿಯಲ್ಲದೆ ಸದಾ ಚಹಾ, ಕಾಫಿ ಮತ್ತಿತರ ಪಾನೀಯ, ಜ್ಯೂಸ್, ಐಸ್‌ಕ್ರೀಂಗಳಲ್ಲದೆ ಕೇರಳದ ಪುಟ್ಟು, ಪರೋಟ, ಆಪಂ, ರೊಟ್ಟಿಯಲ್ಲದೆ ವಿವಿಧ ಜನರ ಇಷ್ಟದ ತಿಂಡಿ-ತಿನಿಸುಗಳೂ ಇಲ್ಲಿ ಲಭ್ಯ.


ಹಮ್ಮೂಸ್, ಥೌಮ್, ಮುತಬ್ಬಲ್ ಇತ್ಯಾದಿ ಅರೆಬಿಯನ್ ಸಲಾಡ್ಸ್ ಮತ್ತು ಸಾಸ್‌ಗಳು, ಮಶ್ರೂಮ್ ಸೂಪ್, ಸೀ ಫುಡ್ ಸೂಪ್, ಮಟನ್ ಅರೆಬಿಯನ್ ಸೂಪ್, ಚಿಕನ್‌ನಲ್ಲಿ ಅಲ್ ಫಹಾಮ್ ದಜಾಜ್, ಪೆಪ್ಪರ್ ಬಾರ್ಬಿಕ್ಯು, ಶಿಶ್ ತವೋಕ್ ಇತ್ಯಾದಿ ಅರೆಬಿಯನ್ ಸ್ಟಾಟರ್ಸ್, ಮಟನ್‌ನಲ್ಲಿ ಲಹಾಮ್ ಶೀಕ್, ಲಹಾಮ್ ಟಿಕ್ಕ, ಮಟನ್ ರಾನ್ ಇತ್ಯಾದಿ ಅರೆಬಿಯನ್ ಸ್ಟಾಟರ್ಸ್, ಅರೆಬಿಯನ್ ಶವರ್ಮ, ಶವರ್ಮ ಸಹಾನ್, ಪ್ಲಾಟರ್ಸ್, ಸಿಜ್ಲರ್ಸ್, ಅರೆಬಿಯನ್ ಬಿರಿಯಾನಿಗಳು, ಅರೆಬಿಯನ್ ದಜಾಜ್ ಗ್ರೇವೀಗಳು, ಅರೆಬಿಯನ್ ಲಹಮ್ ಗ್ರೇವೀಗಳು, ಅರೆಬಿಯನ್ ಸೀಫುಡ್ ಗ್ರೇವೀಗಳು, ಅರೆಬಿಯನ್ ಪಾಸ್ತಾಗಳು, ಅರೆಬಿಯನ್ ಸ್ಯಾಂಡ್‌ವಿಚ್, ನೂಡಲ್ಸ್, ಚೈನೀಸ್ ರೈಸ್, ಚೋಪ್ಸಿ, ಬರ್ಗರ್, ಸ್ನಾಕ್ಸ್, ರೋಲ್ಸ್, ಫ್ರೆಂಚ್ ಫ್ರೈೇಸ್, ಚಿಕನ್ ನಗ್ಗೆಟ್ಸ್, ಫಿಶ್ ಫಿಂಗರ್, ಅರೆಬಿಯನ್ ಸ್ಪೆಷಲ್ ಶೇಕ್ಸ್, ಇಂಡಿಯನ್ ಮಾಕ್ ಟೇಲ್ಸ್, ಐಸ್‌ಕ್ರೀಂ, ಫಾಲುದಾ, ಡೆಸೆರ್ಟ್ಸ್ ಇತ್ಯಾದಿ ವೈವಿಧ್ಯಮಯ, ಸ್ವಾದಿಷ್ಟ ಆಹಾರ ಖಾದ್ಯಗಳು ಲಭ್ಯ ಇವೆ.


ವಿಶೇಷ ಶೆಫ್‌ಗಳು, ನುರಿತ ಸಿಬ್ಬಂದಿ
ಸುಮಾರು 100ಕ್ಕೂ ಅಧಿಕ ನುರಿತ ಸಿಬ್ಬಂದಿ ವರ್ಗ ‘ಸೇವರಿ ರೆಸ್ಟೋರಂಟ್’ನಲ್ಲಿ ಸೇವೆಗೆ ಲಭ್ಯವಿದ್ದು, ಅರೆಬಿ, ಕೇರಳ, ಕರ್ನಾಟಕದ ಶೆಫ್‌ಗಳು ಇಲ್ಲಿದ್ದಾರೆ. ಅಡುಗೆ ಕೋಣೆಯಲ್ಲೇ ಶೇ.60ರಷ್ಟು ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸಲಿದ್ದಾರೆ. ಇನ್ನುಳಿದಂತೆ ಶೇ.20ರಷ್ಟು ಸೇವೆಗೆ ಮತ್ತು ಶೇ.20ರಷ್ಟು ಸಿಬ್ಬಂದಿ ವರ್ಗ ಮೇಲುಸ್ತುವಾರಿ ನೋಡಲಿದೆ. ಎಲ್ಲವೂ ಸಂಸ್ಥೆಯ ರುವಾರಿಯಾಗಿರುವ ಕುಂಞಿ ಮೂಸಾರವರ ಮೇಲ್ನೋಟದಲ್ಲಿ ಕಾರ್ಯಾಚರಿಸಲಿದೆ.

ಯಶಸ್ವಿ ಉದ್ಯಮಿ ಕುಂಞಿ ಮೂಸಾ

ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿ ತಾಲೂಕಿನ ಮಾಣಿಕ್ಕೋತ್ ನಿವಾಸಿಯಾಗಿರುವ ಕುಂಞಿ ಮೂಸಾ 1976ರಲ್ಲಿ ಹೊಟೇಲ್ ಉದ್ಯಮಕ್ಕೆ ಕಾಲಿಟ್ಟರು. ಆರಂಭದಲ್ಲಿ ತವರೂರಿನಲ್ಲಿ ತನ್ನ ಭಾವನ ಹೊಟೇಲ್ ಉದ್ಯಮದ ಜವಾಬ್ದಾರಿ ವಹಿಸಿಕೊಂಡ ಕುಂಞಿ ಮೂಸಾ ಆ ಬಳಿಕ ದುಬೈಯಲ್ಲಿ ‘ವಿಸಿಟರ್ಸ್‌’ ಎಂಬ ಹೊಟೇಲ್ ತೆರೆದರು. ಎಲ್ಲ ವರ್ಗದ ಜನರನ್ನು ಸೆಳೆಯುವ ಸಲುವಾಗಿ

‘ಸೀ-ಸೆಲ್’ ಎಂಬ ಹೆಸರಿನೊಂದಿಗೆ ಗಲ್ಫ್ ರಾಷ್ಟ್ರದಾದ್ಯಂತ ಸಣ್ಣಪುಟ್ಟ ಹೊಟೇಲು, ಕ್ಯಾಂಟೀನ್ ಇತ್ಯಾದಿಯನ್ನು ಇತರರ ಪಾಲುದಾರಿಕೆಯೊಂದಿಗೆ ನಡೆಸತೊಡಗಿದರು. ಈಗಲೂ ಸುಮಾರು 100ಕ್ಕೂ ಅಧಿಕ ಸಣ್ಣ ಮತ್ತು ದೊಡ್ಡ ಮಟ್ಟದ ಹೊಟೇಲ್‌ಗಳು ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿವೆ. ಈ ಮಧ್ಯೆ 2002ರಲ್ಲಿ ಮೊತ್ತಮೊದಲ ಬಾರಿಗೆ ‘ಸೇವರಿ ರೆಸ್ಟೋರಂಟ್’ನ್ನು ಬೆಂಗಳೂರಿನ ಜನತೆಗೆ ಪರಿಚಯಿಸಿದರು. ಇದೀಗ ಬೆಂಗಳೂರಿನಲ್ಲಿ 5, ಚೆನ್ನೈಯಲ್ಲಿ 5 ‘ಸೇವರಿ ರೆಸ್ಟೋರಂಟ್’ಗಳಿವೆ.

ಕೇರಳದ ಕ್ಯಾಲಿಕೆಟ್ ಹಾಗೂ ಕತರ್‌ನಲ್ಲೂ ಕೂಡ ಶೀಘ್ರ ‘ಸೇವರಿ ರೆಸ್ಟೋರಂಟ್’ ಆರಂಭಗೊಳ್ಳಲಿದೆ. ಕುಂಞಿ ಮೂಸಾರಿಗೆ ಈ ಉದ್ಯಮದಲ್ಲಿ ಕುಟುಂಬಸ್ಥರಾದ ನಿಸಾರ್ ಮಾಣಿಕ್ಕೋತ್, ಮುನೀರ್ ಮಾಣಿಕ್ಕೋತ್, ಜಂಶಿದ್ ಮಾಣಿಕ್ಕೋತ್ ಹಾಗು ಮಂಗಳೂರಿನ ಆಸೀಫ್ ಮತ್ತಿತರರು ಸಾಥ್ ನೀಡುತ್ತಿದ್ದಾರೆ.

 
ಡೋರ್ ಡೆಲಿವರಿ 

ಡೆಲಿವರಿ ವ್ಯವಸ್ಥೆಯೂ ಇದೆ. ಆದರೆ ಅದನ್ನೆಲ್ಲಾ ಬೆಂಗಳೂರಿನಲ್ಲೇ ನಿಯಂತ್ರಿಸಲಾಗುತ್ತದೆ. ಫೋನ್ ಕರೆಯನ್ನು ಬೆಂಗಳೂರಿನಲ್ಲೇ ಸ್ವೀಕರಿಸಿ ಕ್ಲಪ್ತ ಸಮಯದಲ್ಲಿ ಮನೆಬಾಗಿಲಿಗೆ ಪೂರೈಸಲಾಗುತ್ತದೆ.

ಗ್ರಾಹಕರ ಸಂತೃಪ್ತಿಯೇ ಯಶಸ್ಸಿನ ಗುಟ್ಟು ಕುಂಞಿ ಮೂಸಾ
‘‘ಕಳೆದ 40 ವರ್ಷದಲ್ಲಿ ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನಾನು ಶುಚಿ-ರುಚಿಯಾದ ಆಹಾರವನ್ನು ಗ್ರಾಹಕರಿಗೆ ಪೂರೈಸುತ್ತಾ ಬಂದಿದ್ದೇನೆ. ಆಯಾ ಪ್ರದೇಶದ ಗ್ರಾಹಕರ ರುಚಿಯನ್ನು ಅರಿತು ಸ್ಥಳೀಯ ತಿಂಡಿ-ತಿನಿಸುಗಳಲ್ಲದೆ, ಅರೆಬಿಕ್ ಶೈಲಿಯ ಆಹಾರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದೇನೆ. ಗ್ರಾಹಕರನ್ನು ಸಂತೃಪ್ತಿಗೊಳಿಸುವುದೇ ನಮ್ಮ ಯಶಸ್ಸಿನ ಗುಟ್ಟು’’ ಎಂದು ‘ಸೇವರಿ’ ಸಂಸ್ಥೆಯ ಅಧ್ಯಕ್ಷ ಕುಂಞಿ ಮೂಸಾ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

                * ಪ್ರಾಯೋಜಿತ ಲೇಖನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News