ವರ್ಷಾಂತ್ಯದಲ್ಲಿ ಭಾರತ ನಂ.1: ಅಗ್ರ ಸ್ಥಾನದಲ್ಲಿ ಅಶ್ವಿನ್, ಜಡೇಜ

Update: 2016-12-31 18:21 GMT

 ದುಬೈ, ಡಿ.31: ಭಾರತದ ಸ್ಪಿನ್ ಬೌಲರ್‌ಗಳಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ಐಸಿಸಿ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಎರಡು ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ನಂ.1 ಸ್ಥಾನದೊಂದಿಗೆ ವರ್ಷವನ್ನು ಕೊನೆಗೊಳಿಸಿದೆ.

ಅಶ್ವಿನ್ ಆಲ್‌ರೌಂಡ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಡೇಜ 3ನೆ ಸ್ಥಾನದಲ್ಲಿದ್ದು, ಟಾಪ್-5ರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇದೀಗ ಎರಡನೆ ಬಾರಿ ಬೌಲರ್‌ಗಳ ರ್ಯಾಂಕಿಂಗ್‌ನ ಅಗ್ರ ಎರಡು ಸ್ಥಾನ ಭಾರತದ ಬೌಲರ್‌ಗಳ ಪಾಲಾಗಿದೆ. 1974ರಲ್ಲಿ ಎಡಗೈ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ಹಾಗೂ ಲೆಗ್-ಸ್ಪಿನ್ನರ್ ಬಿ.ಚಂದ್ರಶೇಖರ್ ರ್ಯಾಂಕಿಂಗ್‌ನಲ್ಲಿ ಅಗ್ರ-2ರಲ್ಲಿದ್ದರು.

 ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಹಾಗೂ ಭಾರತದ ನಾಯಕ ವಿರಾಟ್ ಕೊಹ್ಲಿ ಕ್ರಮವಾಗಿ 1ನೆ ಹಾಗೂ 2ನೆ ಸ್ಥಾನದೊಂದಿಗೆ ವರ್ಷವನ್ನು ಅಂತ್ಯಗೊಳಿಸಿದ್ದಾರ.

ಇದೇ ವೇಳೆ ಟೀಮ್ ಇಂಡಿಯಾ 120 ಅಂಕದೊಂದಿಗೆ ನಂ.1 ರ್ಯಾಂಕ್‌ನಲ್ಲಿ ವರ್ಷವನ್ನು ಅಂತ್ಯಗೊಳಿಸಿದೆ. ಆಸ್ಟ್ರೇಲಿಯ(105 ಅಂಕ) 2ನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News