×
Ad

ನೋಟು ರದ್ದತಿಯ ನಂತರ ಅಸಮರ್ಪಕವಾಗಿರುವ ಎಟಿಎಂ

Update: 2016-12-31 23:52 IST

ಮುಂಬೈ/ಚೆನ್ನೈ, ಡಿ.31: ದೇಶದಲ್ಲಿ ನೋಟು ರದ್ದತಿ ನಿರ್ಧಾರ ಕೈಗೊಂಡ 50 ದಿನಗಳ ಬಳಿಕ ಮೂರನೆ ಎರಡರಷ್ಟು ಎಟಿಎಂಗಳು ಇನ್ನೂ ಕಾರ್ಯ ನಿರ್ವಹಿಸುತ್ತಿಲ್ಲ. ಎಟಿಎಂಗೆ ಹಣ ಮರುಪೂರಣ ಮಾಡುವ ಬದಲು ಇನ್ನೂ ಹಲವು ಬ್ಯಾಂಕ್ ಶಾಖೆಗಳು ಗ್ರಾಹಕರಿಗೆ ನೇರವಾಗಿ ನಗದು ಪೂರೈಸುತ್ತಿವೆ.

ಈ ವರೆಗೆ ಯಾವ ವಾರವೂ ನಗದು ಹರಿವಿನಲ್ಲಿ ಇನ್ನೂ ನಿರಂತರತೆ ಇಲ್ಲ. ದೇಶದಲ್ಲಿ 66 ಸಾವಿರ ಎಟಿಎಂಗಳು ಅಥವಾ ಕೇವಲ ಶೇ. 30ರಷ್ಟು ಎಟಿಎಂಗಳು ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಎಟಿಎಂ ಉದ್ಯಮ ಒಕ್ಕೂಟದ ಅಧ್ಯಕ್ಷ ಸಂಜೀವ್ ಪಟೇಲ್ ಹೇಳಿದ್ದಾರೆ. ದೇಶದಲ್ಲಿರುವ 2.2 ಲಕ್ಷ ಎಟಿಎಂಗಳ ಪೈಕಿ ಶೇ.20ರಷ್ಟು ಎಟಿಎಂಗಳಿಗೆ ಮಾತ್ರ ಸರಿಯಾಗಿ ನಗದು ಪೂರೈಕೆಯಾಗುತ್ತಿದ್ದು, ಸಮರ್ಪಕವಾಗಿ ಲೋಡ್ ಮಾಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನೋಟು ರದ್ದತಿಗಿಂತ ಮೊದಲು ದಿನಕ್ಕೆ 7-8 ಲಕ್ಷ ರೂ. ಹಣವನ್ನು ಎಟಿಎಂಗೆ ಲೋಡ್ ಮಾಡಲಾಗುತ್ತಿತ್ತು. ಆದರೆ ಈಗ 2ರಿಂದ 3 ಲಕ್ಷ ರೂಪಾಯಿ ಮಾತ್ರ ಲೋಡ್ ಮಾಡಲಾಗುತ್ತಿದೆ. ಎಟಿಎಂಗಳ ಎದುರು ಗ್ರಾಹಕರ ದೊಡ್ಡ ಸಾಲು ಸಾಮಾನ್ಯ ಎಂದು ಎನ್‌ಸಿಆರ್ ಕಾರ್ಪೊರೇಶನ್‌ನ ಆಡಳಿತ ನಿರ್ದೇಶಕ ನರ್ವೋಝ್ ದಸ್ತುರ್ ಹೇಳಿದ್ದಾರೆ. ವಾಸ್ತವವಾಗಿ ಬ್ಯಾಂಕ್‌ಗಳು ನೇರವಾಗಿ ಒಬ್ಬ ಗ್ರಾಹಕನಿಗೆ ಹಣ ನೀಡುವ ಸಮಯದಲ್ಲಿ ಎಟಿಎಂ ಮೂಲಕ 10 ಗ್ರಾಹಕರಿಗೆ ಹಣ ವಿತರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News