ಇಂಡೋನೇಷ್ಯಾ:ಲಾಂಚ್‌ನಲ್ಲಿ ಬೆಂಕಿ - 23 ಜನರ ಸಜೀವ ದಹನ

Update: 2017-01-01 10:19 GMT

ಜಕಾರ್ತಾ,ಜ.1: ರಾಜಧಾನಿ ಜಕಾರ್ತಾದ ಸಮೀಪ ರವಿವಾರ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಲಾಂಚ್‌ವೊಂದಕ್ಕೆ ಬೆಂಕಿ ಹಿಡಿದು ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ.

ಈ ನತದೃಷ್ಟ ಲಾಂಚ್ ಜಕಾರ್ತಾದ ಮೌರಾ ಆ್ಯಂಗ್ಕೆ ಬಂದರಿನಿಂದ ಕೆಪುಲಾವನ್ ಸೆರಿಬುದ ರೆಸಾರ್ಟ್ ದ್ವೀಪಕ್ಕೆ ಸುಮಾರು 100 ಜನರನ್ನು ಸಾಗಿಸುತ್ತಿದಾಗ ಈ ಅವಘಡ ಸಂಭವಿಸಿದೆ. 10ಕ್ಕೂ ಅಧಿಕ ಪ್ರಯಾಣಿಕರಿಗೆ ಗಂಭೀರ ಸುಟ್ಟಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯಿಂದಾಗಿ ಲಾಂಚ್‌ನ ಅರ್ಧಭಾಗ ಸುಟ್ಟುಹೋಗಿದೆ ಎಂದು ಸ್ಥಳೀಯ ವಿಪತ್ತು ಶಮನ ಪಡೆಯ ಅಧಿಕಾರಿ ಸೆಪ್ಲಿ ಮಾಡ್ರೆಟೊ ಸುದ್ದಿಗಾರರಿಗೆ ತಿಳಿಸಿದರು.

ಬೋಟ್ ಸೇವೆಗಳ ಮೇಲೆ ನಿಯಂತ್ರಣ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿ ಇಂಡೋನೇಷ್ಯಾದಲ್ಲಿ ಲಾಂಚ್ ಅವಘಡಗಳು ಸಾಮಾನ್ಯವಾಗಿಬಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News