ಎನ್‌ಎಸ್‌ಜಿ ವೆಬ್‌ಸೈಟ್ ಹ್ಯಾಕ್; ಮೋದಿ ವಿರುದ್ಧ ನಿಂದಾತ್ಮಕ ಬರಹ

Update: 2017-01-01 16:15 GMT

ಹೊಸದಿಲ್ಲಿ, ಜ.1: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ವೆಬ್‌ಸೈಟ್‌ಗೆ ಕನ್ನ ಹಾಕಿರುವ ಹ್ಯಾಕರ್‌ಗಳು, ಅದರಲ್ಲಿ ಭಾರತ ವಿರೋಧಿ ಘೋಷಣೆ ಹಾಗೂ ಪ್ರಧಾನಿ ಮೋದಿ ವಿರುದ್ಧ ನಿಂದಾತ್ಮಕ ಸಂದೇಶ ಪ್ರಕಟಿಸಿರುವ ಘಟನೆ ನಡೆದಿದೆ.

ವೆಬ್‌ಸೈಟ್‌ನ ಪ್ರಧಾನ ಪುಟದಲ್ಲಿ ನಾಗರಿಕರನ್ನು ಪೊಲೀಸರು ನಿರ್ದಯವಾಗಿ ಥಳಿಸುತ್ತಿರುವ ಫೋಟೋ ಪ್ರಕಟಿಸಲಾಗಿದ್ದು ಇದಕ್ಕೆ ‘ಕಾಶ್ಮೀರವನ್ನು ಸ್ವತಂತ್ರಗೊಳಿಸಿ’ ಎಂಬ ಅಡಿಬರಹ ನೀಡಲಾಗಿದೆ. ವೆಬ್‌ಸೈಟ್ ಹ್ಯಾಕ್ ಆಗಿರುವುದು ರವಿವಾರ ಸಂಜೆ ಗಮನಕ್ಕೆ ಬಂದ ತಕ್ಷಣ ಅನ್ನು ಬ್ಲಾಕ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಪಾಕಿಸ್ತಾನ ಸಂಯೋಜಿತ ಹ್ಯಾಕರ್‌ಗಳ ಕೃತ್ಯ ಇದು ಎಂದು ಅಧಿಕಾರಿಗಳು ಶಂಕಿಸಿದ್ದು ಈ ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ . ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ಘಟನೆಯ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎನ್‌ಎಸ್‌ಜಿ ಪ್ರಧಾನ ಕಚೇರಿಯಲ್ಲಿ ನಿರ್ವಹಿಸಲಾಗುತ್ತಿರುವ ಈ ವೆಬ್‌ಸೈಟ್‌ನಲ್ಲಿ ಬ್ಲಾಕ್‌ಕ್ಯಾಟ್ ಕಮಾಂಡೋಸ್ ಕುರಿತು ವಿವರವಾದ ಮಾಹಿತಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News