ನಿಮ್ಮ ಸ್ಮಾರ್ಟ್‌ಫೋನ್ ಬಿಸಿಯಾಗದಂತೆ ತಡೆಯಲು ಇಲ್ಲಿವೆ ಆರು ಉಪಾಯಗಳು

Update: 2017-01-07 04:29 GMT

ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಹಿಂದೆಂದಿಗಿಂತಲೂ ಹೆಚ್ಚು ಸ್ಮಾರ್ಟ್ ಆಗುತ್ತಿದೆ. ಅಧಿಕ ಸಾಮರ್ಥ್ಯದ ಬ್ಯಾಟರಿಗಳು ಇದೀಗ ಬಂದಿದ್ದರೆ, ವೇಗವಾಗಿ ಚಾರ್ಜ್ ಆಗುವ ತಂತ್ರಜ್ಞಾನವನ್ನೂ ಹಲವು ಸ್ಮಾರ್ಟ್‌ಫೋನ್‌ಗಳು ಒಳಗೊಂಡಿವೆ. ಆದರೆ ಇದರಿಂದಾಗಿ ಫೋನ್ ಹೆಚ್ಚು ಬಿಸಿಯಾಗುತ್ತಿರುವುದು ಬಳಕೆದಾರರಿಗೆ ತಲೆನೋವು. ಹೆಚ್ಚು ಬಿಸಿಯಾಗದಂತೆ ತಡೆಯಲು ಏನು ಮಾಡಬೇಕು? ಇಲ್ಲಿದೆ ನೋಡಿ ಆರು ಉಪಾಯ.

► ಶಾಖವನ್ನು ಹೀರಿಕೊಳ್ಳುವಂಥ ಕೇಸ್‌ಕವರ್‌ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಇರಿಸಿ. ಇದು ಲೆಕ್ಕಕ್ಕಿಂತ ಹೆಚ್ಚು ಬಿಸಿಯಾಗುವುದನ್ನು ಸ್ವಲ್ಪಮಟ್ಟಿಗೆ ತಡೆಯುತ್ತದೆ.

► ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಬೆಡ್ ಅಥವಾ ಸೋಫಾದ ಬದಲಾಗಿ ಗಟ್ಟಿ ಸಮತಲದ ಮೇಲೆ ಇಡಿ. ಇದರಿಂದ ಚಾರ್ಜ್ ಆಗುವ ವೇಳೆ ಹೊರಸೂಸುವ ಶಾಖ ಹೀರಲ್ಪಡುತ್ತವೆ.

► ಸಾಮಾನ್ಯವಾಗಿ ರಾತ್ರಿಯಿಡೀ ಚಾರ್ಜ್ ಮಾಡುವುದು ನಮ್ಮ ಚಾಳಿ. ಇದರಿಂದ ಬ್ಯಾಟರಿ ಕ್ಷಮತೆ ಕುಸಿಯುತ್ತದೆ. ಜತೆಗೆ ಫೋನ್ ಬಿಸಿಯಾಗಲೂ ಇದು ಕಾರಣವಾಗುತ್ತದೆ. ಇದನ್ನು ತಪ್ಪಿಸಿ.

► ಕೆಲ ಆ್ಯಪ್ ಗಳ ಪ್ರಕ್ರಿಯೆ ಹಾಗೂ ಕೆಲ ಗ್ರಾಫಿಕ್ಸ್‌ಗಳು ಕೂಡಾ ಸ್ಮಾರ್ಟ್ ಫೋನ್ ಬಿಸಿಯಾಗಲು ಕಾರಣವಾಗುತ್ತವೆ. ಇದನ್ನು ತಡೆಯಿರಿ.

► ನಿಮ್ಮ ಸ್ಮಾರ್ಟ್ ಫೋನ್‌ಗೆ ನೇರವಾಗಿ ಬಿಸಿಲು ಬೀಳದಂತೆ ನೋಡಿಕೊಳ್ಳಿ. ಅದರಲ್ಲೂ ಮುಖ್ಯವಾಗಿ ಪ್ಲಾಸ್ಟಿಕ್ ಬ್ಯಾಕ್ ಪ್ಯಾನಲ್ ಹೊಂದಿರುವ ಸೆಟ್‌ಗಳಿಗೆ ಇದು ಮುಖ್ಯ.

► ಬೇರೆ ಚಾರ್ಜರ್‌ಗಳನ್ನು ಬಳಸಿ ಚಾರ್ಜ್ ಮಾಡುವುದು ಹಾಗೂ ಬೇರೆ ಬ್ಯಾಟರಿಗಳನ್ನು ಹಾಕಿ ಚಾರ್ಜ್ ಮಾಡುವುದು ಕೂಡಾ ಫೋನ್ ಬಿಸಿಯಾಗಲು ಕಾರಣವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News