ಪತ್ರಿಕಾಗೋಷ್ಠಿಯಲ್ಲಿ ಸಿಎನ್ಎನ್ ಫೇಕ್ ನ್ಯೂಸ್ ಎಂದು ಜರೆದ ಟ್ರಂಪ್ !

Update: 2017-01-12 04:22 GMT

ವಾಷಿಂಗ್ಟನ್, ಜ.12: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪತ್ರಿಕಾಗೋಷ್ಠಿಯಲ್ಲಿ ಸಿಎನ್ಎನ್ ಸುದ್ದಿವಾಹಿನಿಯ ವರದಿಗಾರ ಜಿಮ್ ಅಕೋಸ್ಟಾ ಅವರ ಜತೆ ವಾಗ್ವಾದಕ್ಕೆ ಇಳಿದು, ಅವರು ಪ್ರಶ್ನೆ ಕೇಳಲು ಅವಕಾಶ ನಿರಕಾರಿಸಿದ ಘಟನೆ ನಡೆದಿದೆ. ಜತೆಗೆ ಸಿಎನ್ಎನ್ ಫೇಕ್ ನ್ಯೂಸ್ ಎಂದು ನಿಯೋಜಿತ ಅಧ್ಯಕ್ಷರು ಜರೆದರು.

ಇನ್ನೂ ಖಾತ್ರಿಪಡಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿರುವ ಸಂಬಂಧ ವರದಿಗಾರನ ಜತೆ ವಾಕ್ಸಮರ ನಡೆಸಿದ ಟ್ರಂಪ್, ಆ ದಾಖಲೆಗಳನ್ನು "ತ್ಯಾಜ್ಯದ ಚೂರುಗಳು" ಎಂದು ವಿಶ್ಲೇಷಿಸಿದರು.

ಟ್ರಂಪ್ ಮತ್ತೊಬ್ಬ ವರದಿಗಾರನತ್ತ ಪ್ರಶ್ನೆ ಕೇಳುವಂತೆ ಕೈಸನ್ನೆ ಮಾಡಿದಾಗ, ಜಿಮ್ ಅಕೋಸ್ಟಾ,"ನೀವು ನಮ್ಮ ಮೇಲೆ ದಾಳಿ ಮಾಡುತ್ತಿದ್ದೀರಿ. ಒಂದು ಪ್ರಶ್ನೆ ಕೇಳಬಹುದೇ" ಎಂದು ಕೋರಿದರು. "ನೀವಲ್ಲ" ಎಂದು ಹೇಳಿದ ಟ್ರಂಪ್, "ನಿಮ್ಮ ಸಂಸ್ಥೆ ಭಯಾನಕ" ಎಂದು ಹೇಳಿದರು.

ಮತ್ತೆ ವರದಿಗಾರ ಅದನ್ನೇ ಕೇಳಿದಾಗ, ಸಿಟ್ಟಾಗಬೇಡಿ. ನಿಮಗೆ ಪ್ರಶ್ನೆ ಕೇಳಲು ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಟ್ರಂಪ್ ಕುರಿತ ವೈಯಕ್ತಿಕ ಮಾಹಿತಿ ವಿಚಾರದಲ್ಲಿ ರಷ್ಯಾ ರಾಜಿ ಮಾಡಿಕೊಂಡಿದೆ ಎಂಬ ಆರೋಪವನ್ನು ಟ್ರಂಪ್ ಅಲ್ಲಗಳೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News