ನೈಜೀರಿಯಾ ವಾಯುಪಡೆಯ ಎಡವಟ್ಟು; ತನ್ನದೆ ನಿರಾಶ್ರಿತರ ಶಿಬಿರದ ಮೇಲೆ ದಾಳಿ; ನೂರಕ್ಕೂ ಅಧಿಕ ಸಾವು

Update: 2017-01-17 17:55 GMT

 ಮೈದುಗುರಿ, ಜ.17: ಬೊಕೋ ಹರಾಮ್ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ನೈಜೀರಿಯಾದ ವಾಯುಪಡೆಯು ತನ್ನದೇ ನಿರಾಶ್ರಿತರ ಶಿಬಿರದ ಮೇಲೆ ಆಕಸ್ಮಿಕವಾಗಿ ಬಾಂಬ್‌ ದಾಳಿ ನಡೆಸಿದ ಪರಿಣಾಮವಾಗಿ ನೂರಕ್ಕೂ ಅಧಿಕ ನಾಗರಿಕರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ನೈಜೀರಿಯಾದ ವಾಯುಪಡೆಯು ಹಾಕಿರುವ ಬಾಂಬ್‌  ಬೋರ್ನೊ ರಾಜ್ಯದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಬಿದ್ದು ನೂರಕ್ಕೂ ಅಧಿಕ ಮಂದಿ ಮೃತಪಟ್ಟರು. ಹಾಗೂ ಹಲವು ಮಂದಿ ಗಾಯಗೊಂಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News