ಮೌರ್ಯರ ಗಾದಿ ಕನಸು

Update: 2017-01-21 18:46 GMT

ಮೌರ್ಯರ ಗಾದಿ ಕನಸು
ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಂಚೂಣಿ ಪಕ್ಷ; ಆದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಆದರೆ ಆ ಗಾದಿಗೆ ನೆಚ್ಚಿನ ಆಯ್ಕೆಯಲ್ಲಿ ತಾವೂ ಒಬ್ಬರು ಎನ್ನುವುದು ಕೇಶವ ಪ್ರಸಾದ್ ಮೌರ್ಯ ಅವರಿಗೆ ಮನದಟ್ಟಾದಂತಿದೆ. ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಪಕ್ಷ ಕಾರ್ಯಕಾರಿಣಿ ಸಭೆಯಲ್ಲಿ, ಮೌರ್ಯ ಮಾಧ್ಯಮಗಳಿಗೆ ಬೈಟ್ ನೀಡುವುದು ಮತ್ತು ಮಾಧ್ಯಮದವರ ಜತೆ ಸಂವಾದ ಮಾಡುತ್ತಿರುವುದು ಕಂಡುಬಂತು. ಆದಾಗ್ಯೂ ಅಚ್ಚರಿ ಎಂದರೆ, ಟಿಕೆಟ್ ಹಂಚಿಕೆ ಕಸರತ್ತಿನಿಂದ ದೂರ ಉಳಿದಿದ್ದಾರೆ. ಅವರ ಯೋಚನಾ ಲಹರಿ ಎಂದರೆ, ಅಧ್ಯಕ್ಷ ಅಮಿತ್ ಶಾ ದೃಷ್ಟಿಯಲ್ಲಿ ಒಳ್ಳೆಯವರು ಎನಿಸಿಕೊಂಡರೆ ಸಿಎಂ ಕುರ್ಚಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎನ್ನುವುದು. ಈ ಕಾರಣದಿಂದಾಗಿ ಟಿಕೆಟ್ ಹಂಚಿಕೆ ಗೊಂದಲದಿಂದ ದೂರ ಇದ್ದಾರೆ!

ಅಮಿತ್ ಶಾ ಚಿತ್ರಪ್ರವಾಹ!

ಯಾಕೋ ಏನೋ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಚಿತ್ರಗಳು ಬಿಜೆಪಿ ಅಧ್ಯಕ್ಷರಿಗೆ ತೃಪ್ತಿ ತಂದಿಲ್ಲ. ವೃತ್ತಿಪರ ಛಾಯಾಗ್ರಾಹಕರಿಂದ ಹೈ ರೆಸಲ್ಯೂಶನ್ ಚಿತ್ರಗಳನ್ನು ತೆಗೆಸಿ, ಮಾಧ್ಯಮ ಕಚೇರಿಗಳಿಗೆ ವರದಿಗಾರರ ಮೂಲಕ ಕಳುಹಿಸಿಯೇ ಬಿಟ್ಟರು. ಹೀಗೆ ಚಿತ್ರಪ್ರವಾಹ ಹರಿದಿರುವುದು ಮಾಧ್ಯಮಕ್ಕೆ ಮಂದಿಗೆ ಒಗಟಾಗಿ ಕಂಡಿತು; ಬಿಜೆಪಿ ಬೀಟ್ ವರದಿಗಾರರು ತಮ್ಮ ಬಾಸ್‌ಗಳಿಗೆ ವಾಸ್ತವ ಕಾರಣ ವಿವರಿಸಬೇಕಾಯಿತು. ದಿನದಿನವೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಚಿತ್ರಗಳು ಅಮಿತ್ ಶಾ ಅವರಿಗೆ ಖುಷಿ ಕೊಟ್ಟಿಲ್ಲ. ಇದಕ್ಕಿದ್ದಂತೆ ಶಾ ಅವರಿಗೆ ತಮ್ಮ ಲುಕ್ ಬಗ್ಗೆ ಯಾಕಷ್ಟು ಕಾಳಜಿ ಬಂತು ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಅದು ಅಮಿತ್ ಶಾ ಅವರಿಗೆ ಕೇಳಬೇಕಾದ ಪ್ರಶ್ನೆ.

ವರಿಷ್ಠರ ಮನಸ್ಸನ್ನೂ ಕ್ಯಾಪ್ಟನ್ ಗೆದ್ದಾರೆ?
ಕಾಂಗ್ರೆಸ್ ಪಕ್ಷ ಪಂಜಾಬ್‌ನಲ್ಲಿ ಅಧಿಕೃತವಾಗಿ ಸಿಎಂ ಅಭ್ಯರ್ಥಿಯ ಹೆಸರು ಘೋಷಿಸಿಲ್ಲ. ಆದರೆ ಉತ್ತರಾಖಂಡ ಚುನಾವಣಾ ಪ್ರಚಾರಕ್ಕೆ ಮಾಜಿ ಸಿಎಂ ಅಮರೀಂದರ್ ಸಿಂಗ್ ಹೋಗಿದ್ದಾಗ, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ‘ಕ್ಯಾಪ್ಟನ್’ ಆಗಿರುವ ಸಿಂಗ್ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಹರಿಶ್ ರಾವತ್ ಬಣ್ಣಿಸಿದರು. ರಾವತ್, ಕ್ಯಾಪ್ಟನ್‌ನ ಮನಗೆದ್ದರು ಎನ್ನುವುದಲ್ಲಿ ಯಾವ ಸಂಶಯವೂ ಇಲ್ಲ. ತಮ್ಮ ಭಾಷಣದ ಸರದಿ ಬಂದಾಗ ಸಿಂಗ್, ರಾವತ್ ಅವರನ್ನು ಬಾಯಿ ತುಂಬಾ ಹೊಗಳಿದರು. ಸಿಂಗ್ ಅವರನ್ನು ಸಂಭಾವ್ಯ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಬಿಂಬಿಸದಿರಲು ಹಲವು ಕಾರಣಗಳಿವೆ. 2012ರಲ್ಲಿ ಸಿಂಗ್ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ರಾಹುಲ್ ಘೋಷಿಸಿದಾಗ, ಪಕ್ಷ ನೆಲಕಚ್ಚಿತು. ಆದ್ದರಿಂದ ತವರಿನಲ್ಲಿ ಸಿಂಗ್ ಅವರನ್ನು ಸಿಎಂ ಕ್ಯಾಂಡಿಡೇಟ್ ಎಂದು ಬಿಂಬಿಸಲು ಕಾಂಗ್ರೆಸ್ ಹಿಂಜರಿಯುತ್ತಿದೆ ಎನ್ನಲಾಗುತ್ತಿದೆ.

ಗುಳ್ಳೆ ನರಿ ಅಜಿತ್ ಸಿಂಗ್ ಕಸರತ್ತು ಯಶಸ್ವಿಯಾದೀತೇ?
ರಾಷ್ಟ್ರೀಯ ಲೋಕದಳ ಮುಖಂಡ ಅಜಿತ್ ಸಿಂಗ್ ಎಲ್ಲ ರಾಜಕೀಯ ಪಟ್ಟುಗಳಲ್ಲೂ ಬಲ್ಲವರು. ಅಖಿಲೇಶ್ ಯಾದವ್ ಕೂಡಾ ತಮ್ಮ ಪಟ್ಟು ಸಡಿಲಿಸದೆ, ಆರ್‌ಎಲ್‌ಡಿಗೆ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವುದಿಲ್ಲ ಎಂಬ ನಿಲುವಿನಿಂದ ಕದಲಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಪಾಲಿನಿಂದ ಆರ್‌ಎಲ್‌ಡಿಗೆ ಸೀಟು ಹಂಚಿಕೆ ಮಾಡುವಂತೆ ಅಖಿಲೇಶ್ ಸೂಚಿಸಿದ್ದಾರೆ. ಅಜಿತ್ ಸಿಂಗ್ ಈ ಲೆಕ್ಕಾಚಾರವನ್ನು ಚೆನ್ನಾಗಿ ಬಲ್ಲರು. ಇದೀಗ ಸಿಂಗ್ ತಮ್ಮ ಪಾಲಿಗಾಗಿ ಕಾಂಗ್ರೆಸ್ ಜತೆ ಗುದ್ದಾಡುತ್ತಿದ್ದಾರೆ. ಇದೀಗ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಬೇಕಾದ ಸರದಿ ಸಿಂಗ್ ಮಗ ಜಯಂತ್ ಚೌಧರಿ ಹಾಗೂ ರಾಹುಲ್ ಗಾಂಧಿ ಅವರದ್ದು. ಹಲವು ಪಕ್ಷಗಳ ಜತೆ ವ್ಯವಹರಿಸಿ ಅನುಭವ ಹೊಂದಿರುವ ಸಿಂಗ್ ಕಾಂಗ್ರೆಸ್‌ನಿಂದ ಸಾಧ್ಯವಾದಷ್ಟೂ ಹೆಚ್ಚು ಸ್ಥಾನಗಳನ್ನು ಪಡೆಯುವ ಕಸರತ್ತು ನಡೆಸಿದ್ದಾರೆ. ಮೂಲಗಳ ಪ್ರಕಾರ 25ಕ್ಕೆ ಸಿಂಗ್ ಗಾಳ ಹಾಕಿದ್ದಾರೆ. ಆದರೆ ಅಷ್ಟೊಂದು ಸ್ಥಾನಗಳನ್ನು ಕಾಂಗ್ರೆಸ್ ಬಿಟ್ಟುಕೊಟ್ಟೀತೇ?

ಚೌತಾಲಾ ನೆರವಿಗೆ ಬಂದ ಸುಪ್ರಿಯೊ
ಹರ್ಯಾಣದ ಸರಣಿ ಹಗರಣಗಳಿಗಾಗಿ ತಂದೆ ಹಾಗೂ ಅಜ್ಜ ಜೈಲಿನಲ್ಲಿ ಕೊಳೆಯುತ್ತಿದ್ದರೂ, ಎಂಪಿ ದುಷ್ಯಂತ್ ಚೌತಾಲಾ ಮಾತ್ರ ವಿವಾಹ ಸಿದ್ಧತೆಯಲ್ಲಿದ್ದಾರೆ. ಅಜ್ಜ ಹಾಗೂ ಹರ್ಯಾಣದ ಮಾಜಿ ಸಿಎಂ ಓಂಪ್ರಕಾಶ್ ಚೌತಾಲಾ ಹಾಗೂ ತಂದೆ ಕೂಡಾ ಸಮಾರಂಭಕ್ಕೆ ಹಾಜರಾಗಲು ಸಜ್ಜಾಗಿದ್ದಾರೆ. ಆದರೆ ದುಷ್ಯಂತ್‌ಗೆ ಮಾತ್ರ ತಮ್ಮದೇ ಚಿಂತೆ. ವಿವಾಹ ಉಡುಗೆ ವಿನ್ಯಾಸಕ್ಕೆ ಉತ್ತಮ ವಿನ್ಯಾಸಕರಿಗೆ ದುಷ್ಯಂತ್ ಹುಡುಕಾಟ ನಡೆಸಿದ್ದಾರೆ. ಒಳ್ಳೆಯ ಡಿಸೈನರ್‌ಗಳಿದ್ದರೆ ಸೂಚಿಸುವಂತೆ ಸಂಸತ್ತಿನ ಸ್ನೇಹಿತರಲ್ಲೂ ಕೇಳಿದ್ದಾರೆ. ರಾಜ್ಯಸಚಿವ ಬಬುಲ್ ಸುಪ್ರಿಯೊ, ಇದಕ್ಕೆ ಸ್ಪಂದಿಸಿದ್ದಾರೆ. ಖ್ಯಾತ ಡಿಸೈನರ್ ಸವ್ಯಸಾಚಿ ಮುಖರ್ಜಿ ಹೆಸರು ಸಲಹೆ ಮಾಡಿದ್ದಲ್ಲದೇ, ಅವರ ಸಂಪರ್ಕ ವಿವರವನ್ನೂ ನೀಡಿದ್ದಾರೆ.. ವೈಯಕ್ತಿಕವಾಗಿ ತಾವೇ ಮುಖರ್ಜಿ ಜತೆ ಮಾತನಾಡುವುದಾಗಿಯೂ ಭರವಸೆ ನೀಡಿದ್ದಾರೆ. ಈ ಬಗ್ಗೆ ನೆರವು ನೀಡಿದ್ದಕ್ಕೆ ಸುಪ್ರಿಯೊ ಅವರನ್ನು ನಂಬಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News