2020 ರಲ್ಲಿ ಟ್ರಂಪ್ ಗೆ ಕೆನಡಿ ಎದುರಾಳಿ !

Update: 2017-01-23 10:12 GMT

ವಾಷಿಂಗ್ಟನ್, ಜ.23: ಅಮೆರಿಕದ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮ ಆಡಳಿತದ ಸಮಯದಲ್ಲಿ ಜಪಾನ್ ರಾಯಭಾರಿಯಾಗಿದ್ದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿಯ ಪುತ್ರಿ ಕ್ಯಾರೋಲಿನ್ ಕೆನಡಿಯವರು ಟ್ರಂಪ್  ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಹುದ್ದೆ ಕಳೆದುಕೊಂಡಿದ್ದಾರೆ. ಆಕೆಯಿಂದ ತೆರವಾದ ಹುದ್ದೆಯನ್ನೂ ಇಲ್ಲಿಯ ತನಕ ತುಂಬಲಾಗಿಲ್ಲ.

ಆದರೆ ಹುದ್ದೆ ಕಳೆದುಕೊಂಡಿರುವ ಕ್ಯಾರೋಲಿನ್ ಮಾತ್ರ ಒಂದು ವಿಷಯದಲ್ಲಿ ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಆಕೆ 2018ರಲ್ಲಿ ಸೆನೆಟ್ ಚುನಾವಣೆಗೆ ಅಭ್ಯರ್ಥಿಯಾಗಲಿದ್ದಾರೆ ಅಷ್ಟೇ ಅಲ್ಲ, 2020ರಲ್ಲಿ ಅಧ್ಯಕ್ಷೀಯ ಹುದ್ದೆಗೂ ಸ್ಪರ್ಧಿಸಲಿದ್ದಾರೆ.

ಆಡಳಿತಾತ್ಮಕವಾಗಿ ಹೇಳುವುದಾದರೆ ಕ್ಯಾರೊಲಿನ್ ಕೆನಡಿಗೆ ಹಿಲರಿ ಕ್ಲಿಂಟನ್ ಅವರಷ್ಟೇ ಅನುಭವವಿದೆ. ಅಲ್ಲದೆ, ಹಿಲರಿಯವರಂತೆ ಅವರು ಇಲ್ಲಿಯ ತನಕ ಯಾವುದೇ ವಿವಾದದಲ್ಲಿ ಸಿಲುಕಿಲ್ಲ.

ಕ್ಯಾರೊಲಿನ್ ಅವರು ಜಪಾನ್ ದೇಶದಲ್ಲಿ ಅಮೆರಿಕದ ರಾಯಭಾರಿಯಾಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಈಗಾಗಲೇ ಸೈ ಎನಿಸಿಕೊಂಡಿದ್ದಾರೆ. ಕೆನಡಿ ಕುಟುಂಬ ಹಲವಾರು ವರ್ಷಗಳಿಂದ ಡೆಮಾಕ್ರೆಟಿಕ್ ಪಕ್ಷದ ಬೆಂಬಲಿಗರೆನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News