ವಾಟ್ಸ್ ಆ್ಯಪ್ ನ ಈ ಅತ್ಯಂತ ವಿಶೇಷ ಫೀಚರ್ ಹೊಸ ಸಮಸ್ಯೆಗಳಿಗೆ ದಾರಿಯಾಗುವುದೇ ?

Update: 2017-01-31 05:33 GMT

ಹೊಸದಿಲ್ಲಿ,ಜ.31: ಫೇಸ್‌ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ಮತ್ತೊಂದು ವಿಶೇಷ ಹಾಗೂ ಅತ್ಯಾಧುನಿಕ ಸೌಲಭ್ಯ ಒದಗಿಸಲು ಮುಂದಾಗಿದೆ. ಇದರಲ್ಲಿ ವಾಟ್ಸ್ ಆ್ಯಪ್ ಬಳಕೆದಾರರು ತಮ್ಮ ಗುಂಪಿನ ಸದಸ್ಯರು ಎಲ್ಲಿದ್ದಾರೆ ಎನ್ನುವುದನ್ನು ತಕ್ಷಣವೇ ಪತ್ತೆ ಮಾಡಲು ಸಾಧ್ಯವಾಗಲಿದೆ.

ಹೊಸ ಟ್ರ್ಯಾಕಿಂಗ್ ಲಕ್ಷಣವನ್ನು ವಿವರಿಸುವ ಕೆಲ ಚಿತ್ರಗಳು ಸೋರಿಕೆಯಾಗಿದ್ದು, ಇವು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿವೆ. ‘@WABetaInfo’ಎಂಬ ಟ್ವಿಟ್ಟರ್ ಹ್ಯಾಂಡಲ್ ಈ ಚಿತ್ರವನ್ನು ಮೊದಲು ಬೆಳಕಿಗೆ ತಂದಿದೆ. ಟ್ವೀಟ್‌ನಲ್ಲಿ ಶೇರ್ ಮಾಡಲಾದ ಮಾಹಿತಿಯ ಪ್ರಕಾರ, ಈ ಹೊಸ ಸೌಲಭ್ಯ ಈಗಾಗಲೇ ಆ್ಯಪಲ್ ಐಓಎಸ್ ಬಳಕೆದಾರರಿಗೆ ಲಭ್ಯವಿದೆ. ವಾಟ್ಸ್ ಅಪ್ ಬೆಟಾ ವಿ2.17.3.28ನ ಅಂಗವಾಗಿ ಇದು ಲಭ್ಯವಿದೆ. ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆ್ಯಪ್ ಬೆಟಾ ವಿ2.16.299 ಭಾಗವಾಗಿಯೂ ನೀಡಲಾಗುತ್ತಿದೆ. ಈ ಹೊಸ ಲಕ್ಷಣವನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಗ್ರಾಹಕರು ಅಗತ್ಯವಿದ್ದರೆ ಸಕ್ರಿಯಗೊಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಸಕ್ರಿಯಗೊಳಿಸಿದ ತಕ್ಷಣ ಬಳಕೆದಾರರು ಯಾವ ಸ್ಥಳದಲ್ಲಿದ್ದಾರೆ ಹಾಗೂ ಗುಂಪಿನ ಇತರ ಸದಸ್ಯರು ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತದೆ. ಗ್ರೂಪ್ ಸೆಟ್ಟಿಂಗ್‌ನ ಶೋ ಮೈ ಫ್ರೆಂಡ್ ಎಂಬ ಶೀರ್ಷಿಕೆಯಡಿ ಇದು ಸಿಗುತ್ತದೆ. ಇದನ್ನು 1, 2 ಹಾಗೂ 5 ನಿಮಿಷಗಳಿಗೊಮ್ಮೆ ಇದನ್ನು ಸಕ್ರಿಯಗೊಳಿಸಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News