×
Ad

ಸಬ್ ಕೆ ಸಾಥ್ , ಸಬ್ ಕೆ ವಿಕಾಸ್ ಸರಕಾರದ ಉದ್ದೇಶ: ರಾಷ್ಟ್ರಪತಿ ಪ್ರಣವ್ ಮುಖರ್ಜಿ

Update: 2017-01-31 11:24 IST

ಹೊಸದಿಲ್ಲಿ, ಜ.31: ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ಸುಧಾರಿಸುವುದು. ಬಡವರ ಮತ್ತು  ಹಿಂದುಳಿದ ವರ್ಗದ ಅಭಿವೃದ್ಧಿ ಸರಕಾರದ ಗುರಿಯಾಗಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟರು.

ಸಂಸತ್ತಿನ  ಜಂಟಿ ಅಧಿವೇಶವನ್ನುದ್ದೇಶಿಸಿ ಮಾತನಾಡಿದ ಅವರು   ಸಬ್ ಕೆ  ಸಾಥ್, ಸಬ್ ಕೆ ವಿಕಾಸ್  ಕೇಂದ್ರ ಸರಕಾರದ   ಉದ್ದೇಶವಾಗಿದೆ ಎಂದರು.

ಭಾಷಣದ ಹೈಲೈಟ್ಸ್

*ಇದೇ ಮೊದಲ ಬಾರಿಗೆ ರೈಲ್ವೇ ಬಜೆಟ್ ಸಾಮಾನ್ಯ ಬಜೆಟ್ ನಲ್ಲಿ ವಿಲೀನ ಮಾಡಲಾಗಿದ್ದು, ಮೊದಲ ಬಾರಿಗೆ ಏಕಕಾಲದಲ್ಲಿ ರೈಲ್ವೇ ಬಜೆಟ್ ನ್ನು ಮಂಡನೆ ಮಾಡಲಾಗುತ್ತಿದೆ.
*26 ಕೋಟಿ ಜನ್ ಧನ್ ಖಾತೆ ತೆರೆಯಲಾಗಿದೆ.
*ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಜನರಿಗೆ ಸೂರು.ಮುದ್ರಾ ಯೋಜನೆಯಡಿ ಮನೆ ಕಟ್ಟಲು ಸಾಲ ಸೌಲಭ್ಯ.

*ಪ್ರಧಾನ ಮಂತ್ರಿ ಉಜ್ವಲ್‌ ಯೋಜನೆಯಡಿ ಜನರಿಗೆ ಎಲ್ ಪಿಜಿ
*ಕಪ್ಪು ಹಣದ ವಿರುದ್ಧ ಸರಕಾರದ ಹೋರಾಟ ಮುಂದುವರಿಯಲಿದೆ.
*ರೈತರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಅಗತ್ಯದ ಕ್ರಮ ಕೈಗೊಳ್ಳಲಾಗಿದೆ.
*ಸೇನೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ.
*ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನ ಜನಾಂದೋಲನವಾಗಿ ಪರಿವರ್ತನೆಗೊಂಡಿದೆ.

*ದೀನ್ ದಯಾಳ್ ಉಪಾಧ್ಯಾಯ್ ಗ್ರಾಮ್ ಜ್ಯೋತಿ ಯೋಜನೆ ಅಡಿಯಲ್ಲಿ 11,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. 

*ಬಡವರ ಅಭಿವೃದ್ಧಿಗೆ  ಸರಕಾರದ ದಿಟ್ಟ ನಿರ್ಧಾರ. 5 ಕೋಟಿ ಜನರಿಗೆ ಸರಕಾರದ ಎಲ್ ಪಿಜಿ. ಸುಮಾರು 1.2 ಕೋಟಿ ಜನರು ಎಲ್ ಪಿಜಿ ಸಬ್ಸಿಡಿ ತೊರೆದಿದ್ದಾರೆ. 
* ಸೇನೆಯ ಸಮಾನ ವೇತನ ಮತ್ತು ಸಮಾನ ಪಿಂಚಣಿ ಸಮಸ್ಯೆಯನ್ನು ಸರಕಾರ  ಬಗೆಹರಿಸಿದೆ.
* 7ನೇ ವೇತನ ಆಯೋಗ ರಚನೆಯಿಂದಾಗಿ  50 ಲಕ್ಷ ಉದ್ಯೋಗಿಗಳಿಗೆ ಹಾಗೂ 35 ಲಕ್ಷ ಪಿಂಚಣಿದಾರರಿಗೆ ಲಾಭವಾಗಿದೆ

* ಕ್ರೀಡಾ ಲೋಕದಲ್ಲಿ ಮಿಂಚುತ್ತಿರುವ ಪಿವಿ.ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರ ಸಾಧನೆಯನ್ನು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News