ಹಕ್ಕಿಗಳು ಇಂಗ್ಲೀಷ್‌ನ ‘ವಿ’ ಆಕಾರದಲ್ಲಿ ಹಾರುವುದೇಕೆ...

Update: 2017-02-08 09:12 GMT

ಪಕ್ಷಿಗಳು ಗುಂಪು ಗುಂಪಾಗಿ ದೂರಕ್ಕೆ ಸಾಗುವಾಗ ಇಂಗ್ಲೀಷ್‌ನ ‘ವಿ’ ಅಕ್ಷರದ ಮಾದರಿಯಲ್ಲಿ ಹಾರುತ್ತವೆ. ಏಕೆಂದು ಎಂದಾದರೂ ಯೋಚಿಸಿದ್ದೀರಾ...?

ಶಕ್ತಿಯನ್ನು ಉಳಿಸಲು, ಪರಸ್ಪರ ಸಂವಹನ ಮತ್ತು ಗೋಚರತೆಯಲ್ಲಿರಲು ಹಕ್ಕಿಗಳು ಈ ಕ್ರಮವನ್ನು ಅನುಸರಿಸುತ್ತವೆ.

ಹಕ್ಕಿಗಳ ಗುಂಪು ಹಾರಾಟವನ್ನು ಆರಂಭಿಸಿದಾಗ ಅವು ತ್ವರಿತವಾಗಿ ‘ವಿ’ ಆಕಾರವನ್ನು ರೂಪಿಸಿಕೊಳ್ಳುತ್ತವೆ ಮತ್ತು ಎಲ್ಲಕ್ಕಿಂತ ಮುಂದೆ ಮಧ್ಯಭಾಗದಲ್ಲಿ ಮಾರ್ಗದರ್ಶಿ ಹಕ್ಕಿಯಿರುತ್ತದೆ. ಉಳಿದೆಲ್ಲ ಹಕ್ಕಿಗಳು ಅದರ ಹಿಂದೆ ಎರಡು ಸಾಲುಗಳಲ್ಲಿ ಹಾರುತ್ತವೆ.

ಮೂಲಕ ತನ್ನ ಹಿಂದೆ ಹಾರುವ ಹಕ್ಕಿಗೆ ಗಾಳಿಯ ಪ್ರತಿರೋಧವನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ಹಕ್ಕಿಯೊಂದು ತಾನು ಒಂಟಿಯಾಗಿ ಕ್ರಮಿಸುವ ದೂರದ ಶೇ.70ರಷ್ಟು ಅಧಿಕ ದೂರವನ್ನು ಅಷ್ಟೇ ಶಕ್ತಿಯನ್ನು ಬಳಸಿ ಹಾರಲು ಸಾಧ್ಯವಾಗುತ್ತದೆ.

ಯಾವುದೇ ಹಕ್ಕಿ ‘ವಿ’ ರಚನೆಯಂದ ಬೇರ್ಪಟ್ಟಾಗ ಅದು ಹಾರಲು ಹೆಚ್ಚಿನ ಪ್ರಯತ್ನ ಮತ್ತು ಶಕ್ತಿಯನ್ನು ವಿನಿಯೋಗಿಸಬೇಕಾಗುತ್ತದೆ. ಹೀಗಾಗಿ ಅದು ತಕ್ಷಣವೇ ‘ವಿ’ ರಚನೆಗೆ ಮರಳುತ್ತದೆ.

ಎಲ್ಲಕ್ಕೂ ಮುಂದಿರುವ ಮಾರ್ಗದರ್ಶಿ ಹಕ್ಕಿ ಹೆಚ್ಚಿನ ಶಕ್ತಿಯನ್ನು ವ್ಯಯಿಸುವುದರಿಂದ ತನಗೆ ದಣಿವಾದಾಗ ಅದು ಆ ಸ್ಥಾನವನ್ನು ತೊರೆದು ಗಾಳಿಯ ಪ್ರತಿರೋಧವು ಅತ್ಯಂತ ಕಡಿಮೆಯಿರುವ ಸಾಲಿನ ಕೊನೆಯಲ್ಲಿ ಸೇರಿಕೊಳ್ಳುತ್ತದೆ. ಇದೇ ವೇಳೆ ಇನ್ನೊಂದು ಹಕ್ಕಿಯು ಮಾರ್ಗದರ್ಶಿ ಸ್ಥಾನವನ್ನು ವಹಿಸಿಕೊಂಡು ಗುಂಪನ್ನು ಮುನ್ನಡೆಸುತ್ತದೆ.

ಈ ಹಕ್ಕಿಗಳು ಗುಂಪಾಗಿ ಹಾರುತ್ತಿರುವಾಗ ದೊಡ್ಡದಾಗಿ ಶಬ್ದವನ್ನು ಹೊರಡಿಸುತ್ತಿ ರುತ್ತವೆ. ಇದು ಅವು ಸುದೀರ್ಘ ಹಾರಾಟದ ಸಂದರ್ಭ ತಮ್ಮ ನಡುವೆ ಸಂವಹನ ನಡೆಸುವ ವಿಧಾನವಾಗಿದೆ.

ಮಾಹಿತಿ : MARS Learning Centre, Mangalore. Ph: 9845563943

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News