ಟ್ರಂಪ್ ಭಯೋತ್ಪಾದಕ ದಾಳಿ ಪಟ್ಟಿಯಲ್ಲಿ ಉರಿ, ಪಠಾಣ್‌ಕೋಟ್ ಇಲ್ಲ!

Update: 2017-02-08 03:49 GMT

ವಾಷಿಂಗ್ಟನ್, ಫೆ.8: ವಿಶ್ವದ ಪ್ರಮುಖ ಭಯೋತ್ಪಾದಕ ದಾಳಿ ಪಟ್ಟಿಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಬಿಡುಗಡೆ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಮಾಧ್ಯಮ ಕ್ಷೇತ್ರ ಸಾಕಷ್ಟು ಗಮನಹರಿಸದ ದಾಳಿ ಘಟನೆಗಳು ಎಂಬ 78 ಉಗ್ರ ದಾಳಿ ಘಟನೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಆದರೆ ಪಾಶ್ಚಿಮಾತ್ಯರು ಒಳಗೊಳ್ಳದ ಭಯೋತ್ಪಾದಕ ದಾಳಿಯನ್ನು ಈ ಪಟ್ಟಿಯಲ್ಲಿ ಸೇರಿಸದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದ ಮೇಲೆ ಕಳೆದ ವರ್ಷ ನಡೆದ ಉರಿ ದಾಳಿ ಹಾಗೂ ಪಠಾಣ್‌ಕೋಟ್ ದಾಳಿಯಂಥ ಪ್ರಮುಖ ಘಟನೆಗಳು ಕೂಡಾ ಈ ಪಟ್ಟಿಯಲ್ಲಿ ಸೇರಿಲ್ಲ.

2014ರ ಸೆಪ್ಟೆಂಬರ್‌ನಿಂದ 2016 ಡಿಸೆಂಬರ್‌ವರೆಗೆ ನಡೆದ ಪ್ರಮುಖ ಉಗ್ರದಾಳಿ ಪ್ರಕರಣಗಳನ್ನು ಈ ಪಟ್ಟಿ ಒಳಗೊಂಡಿದೆ. ಆದರೆ ಪಟ್ಟಿಯಲ್ಲಿ ಅಂಕಿ ಅಂಶಗಳಿಗೆ ಸಂಬಂಧಿಸಿದಂತೆ ಹಲವು ಲೋಪಗಳು ಇವೆ. ಗೂಗಲ್‌ನಿಂದ ಘಟನಾವಳಿಗಳ ವಿವರಗಳನ್ನು ತೆಗೆದು ಪಟ್ಟಿ ಮಾಡಿದ್ದು, ಕೆಲ ಪ್ರಮುಖ ದಾಳಿ ಪ್ರಕರಣಗಳಿಗೆ ಮಹತ್ವ ನೀಡಿಲ್ಲ.

ಹೀಗೆ ಪಟ್ಟಿಯಿಂದ ಬಿಟ್ಟುಹೋದ ಘಟನೆಗಳಲ್ಲಿ ಪಲ್ಸ್ ನೈಟ್‌ಕ್ಲಬ್ ದಾಳಿ, ನೈಸ್‌ನಲ್ಲಿ ನಡೆದ ಬೆಸ್ಟಿಲ್ ಡೇ ದಾಳಿ, ಪ್ಯಾರೀಸ್ ದಾಳಿ, ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಸಾನ್ ಬರ್ನಾಡಿನೊ ದಾಳಿ ಈ ಪಟ್ಟಿಯಲ್ಲಿ ಸಾಕಷ್ಟು ಮಹತ್ವ ಪಡೆದಿಲ್ಲ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News