ಜನರ ಗುಂಪಿನ ಮೇಲೆ ನುಗ್ಗಿದ ಕಾರು; ಓರ್ವ ಸಾವು

Update: 2017-02-26 05:26 GMT

ಹೈಡೆಲ್ಬರ್ಗ್(ಜರ್ಮನಿ), ಫೆ.26: ಜನರ ಗುಂಪಿನ ಮೇಲೆ ಕಾರನ್ನು ಚಲಾಯಿಸಿದ ಪರಿಣಾಮವಾಗಿ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಜರ್ಮನಿಯ ಹೈಡೆಲ್ಬರ್ಗ್ ನಲ್ಲಿ ಶನಿವಾರ ನಡೆದಿದೆ.

ಜರ್ಮನಿಯ 35ರ ಹರೆಯದ ವ್ಯಕ್ತಿಯೊಬ್ಬ ಬೇಕರಿಯ ಹೊರಗಡೆ ಸೇರಿದ್ದ ಜನರ ಗುಂಪಿನ ಮೇಲೆ ಏಕಾಏಕಿ ಕಾರು ನುಗ್ಗಿಸಿದ ಪರಿಣಾಮವಾಗಿ ಮೂವರು ಗಾಯಗೊಂಡರು. ಈ ಪೈಕಿ ಜರ್ಮನಿಯ 73ರ ಹರೆಯದ ವೃದ್ದರೊಬ್ಬರು ಮೃತಪಟ್ಟರು. ಆಸ್ಟ್ರೇಲಿಯದ 32ರ ಹರೆಯದ ವ್ಯಕ್ತಿ ಮತ್ತು ಬೋಸ್ನಿಯಾದ ಮಹಿಳೆಯೊಬ್ಬಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಬಳಿಕ ಆರೋಪಿ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಅವನ ಕೈಯಲ್ಲಿ ಚಾಕು ಇತ್ತು ಎನ್ನಲಾಗಿದ್ದು, ಪೊಲೀಸರು ಆತನನ್ನು ಬೆನ್ನಟ್ಟಿ ಅವನ ಮೇಲೆ ಗುಂಡು ಹಾರಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರ ಗುಂಡೇಟಿನಿಂದ ಗಂಭೀರ ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರಗೆ ದಾಖಲಿಸಲಾಗಿದೆ. ಆರೋಪಿ ಉಗ್ರನಾಗಿರುವ  ಸಾಧ್ಯತೆಯನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.

ಬರ್ಲಿನ್ ನಲ್ಲಿ ಕಳೆದ ಡಿ.19ರಂದು ಉಗ್ರನೊಬ್ಬ ಕ್ರಿಸ್ ಮಸ್ ಮಾರ್ಕೆಟ್ ನಲ್ಲಿ ಜನರ ಮೇಲೆ ಟ್ರಕ್ ನುಗ್ಗಿಸಿದ ಪರಿಣಾಮವಾಗಿ 12 ಮಂದಿ ಮೃತಪಟ್ಟಿದ್ದರು

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News