×
Ad

ಪ್ರವೇಶ ನಿಷೇಧ ಆದೇಶಕ್ಕೆ ಟ್ರಂಪ್ ಸಹಿ

Update: 2017-03-06 23:53 IST

ವಾಷಿಂಗ್ಟನ್,ಮಾ.6: ಹೊಸ ವೀಸಾಗಳನ್ನು ಕೋರುವ, ಮುಸ್ಲಿಮ್ ಬಾಹುಳ್ಯದ ಆರು ರಾಷ್ಟ್ರಗಳ ಪ್ರಜೆಗಳ ಅಮೆರಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಪರಿಷ್ಕೃತ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಸಹಿ ಮಾಡಿದ್ದಾರೆ. ಪರಿಷ್ಕೃತ ಪಟ್ಟಿಯಲ್ಲಿ ಇರಾಕ್‌ನ್ನು ಕೈಬಿಡಲಾಗಿದೆ. ಟ್ರಂಪ್ ಅವರ ಈ ವಿವಾದಾತ್ಮಕ ವಲಸೆ ನೀತಿಯು ವಿಶ್ವಾದ್ಯಂತ ಆಕ್ರೋಶವನ್ನು ಸೃಷ್ಟಿಸಿತ್ತು.
ಸುಡಾನ್,ಸಿರಿಯಾ,ಇರಾನ್,ಲಿಬಿಯಾ,ಸೋಮಾಲಿಯಾ ಮತ್ತು ಯೆಮೆನ್ ರಾಷ್ಟ್ರಗಳ ಪ್ರಜೆಗಳ ವಿರುದ್ಧ ಹೇರಲಾಗಿರುವ 90 ದಿನಗಳ ನಿಷೇಧವು ಈಗಾಗಲೇ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಪರಿಷ್ಕೃತ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
2017,ಜ.27ರ ಸಂಜೆ ಐದು ಗಂಟೆಗೆ ಮೊದಲು ಅಧಿಕೃತ ವೀಸಾ ಹೊಂದಿದ್ದ ಅಥವಾ ಕಾರ್ಯಕಾರಿ ಆದೇಶದ ಪರಿಣಾಮಕಾರಿ ದಿನಾಂಕದಂದು ಅಧಿಕೃತ ವೀಸಾ ಹೊಂದಿರುವ ಯಾವುದೇ ವ್ಯಕ್ತಿಗೆ ಅಮೆರಿಕ ಪ್ರವೇಶ ನಿಷೇಧವು ಅನ್ವಯಿಸುವುದಿಲ್ಲ ಎಂದು ಆದೇಶವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News