ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಸಿಕ್ಕೀತೇ?

Update: 2017-03-09 18:54 GMT

ಮಾನ್ಯರೆ,

ಮಂಗಳೂರು ನಗರದೊಳಗೆ ವಾಹನ ಪಾರ್ಕಿಂಗ್ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಮುಖ್ಯ ರಸ್ತೆಗಳಿಂದ ಹಿಡಿದು ಒಳ ರಸ್ತೆಗಳಲ್ಲೂ ವಾಹನ ಪಾರ್ಕಿಂಗ್ ಸಮಸ್ಯೆ ಸಾರ್ವಜನಿಕರನ್ನು ಪೀಡಿಸುತ್ತಿದೆ. ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ ಒಂದೊಂದು ಸಾಲುಗಳಲ್ಲಿ ವಾಹನಗಳು ನಿಲ್ಲುತ್ತಿದ್ದರೆ, ಇನ್ನು ಕೆಲವು ರಸ್ತೆಯ ಬದಿಗಳಲ್ಲಿ ಎರೆಡೆರಡು, ಮೂರು-ಮೂರು ಸಾಲು ವಾಹನಗಳನ್ನು ನಿಲ್ಲಿಸಲಾಗುತ್ತಿವೆ. ಕೆಲವರಂತೂ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿ ತಮ್ಮದೇ ಮನೆಯ ಜಾಗವೆಂಬಂತೆ ವರ್ತಿಸುತ್ತಾರೆ.
ಪ್ರತೀ ಶುಕ್ರವಾರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ನೇರ ಫೋನ್‌ಇನ್ ಕಾರ್ಯಕ್ರಮ ನಡೆಯುತ್ತಿರುತ್ತದೆ. ಇದುವರೆಗೆ ನಡೆದ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಶೀಲಿಸಿದಾಗ ಅತೀ ಹೆಚ್ಚು ಪ್ರಶ್ನೆಗಳು ಪಾರ್ಕಿಂಗ್ ಅವ್ಯವಸ್ಥೆಯ ಬಗ್ಗೆಯೇ ಬಂದಿದೆಯಂತೆ. ಆದರೆ ಈ ಸಮಸ್ಯೆಯ ಬಗ್ಗೆ ಸೂಕ್ತ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ.
ನಗರದ ಈ ಪ್ರಮುಖ ಸಮಸ್ಯೆಯ ಬಗ್ಗೆ ಇನ್ನಾದರೂ ಸಂಬಂಧಿತರು ಗಮನಹರಿಸಿ, ಇಕ್ಕಟ್ಟಾದ ರಸ್ತೆಗಳನ್ನು ಪಾರ್ಕಿಂಗ್‌ಮುಕ್ತಗೊಳಿಸಿ, ನಗರದ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡಬೇಕಾಗಿದೆ.

Writer - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Editor - -ಜೆ. ಎಫ್. ಡಿ’ಸೋಜಾ, ಅತ್ತಾವರ

contributor

Similar News