ಶಾಲೆಗಳಲ್ಲಿ ಭಗವದ್ಗೀತೆ ಕಲಿಕೆ ಕಡ್ಡಾಯ : ಲೋಕಸಭೆಯಲ್ಲಿ ವಿಧೇಯಕ ಮಂಡನೆ

Update: 2017-03-10 16:19 GMT

ಹೊಸದಿಲ್ಲಿ, ಮಾ.10: ಶಾಲೆಗಳಲ್ಲಿ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ಪಠ್ಯಕ್ರಮವಾಗಿ ಕಡ್ಡಾಯಯಗೊಳಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಬಿಜೆಪಿ ಸಂಸದ ರಮೇಶ್ ಬಿಧೂರಿ ಖಾಸಗಿ ಸದಸ್ಯರ ಮಸೂದೆಯಡಿ ಮಂಡಿಸಿದ ಈ ವಿಧೇಯಕವು, ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯ ಕಲಿಕೆಯನ್ನು ಕಡ್ಡಾಯಗೊಳಿಸುವ ಉದ್ದೇಶವನ್ನು ಹೊಂದಿದೆ. ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾದ ಒಟ್ಟು 103 ಖಾಸಗಿ ಸದಸ್ಯರ ಮಸೂದೆಯಲ್ಲಿ ಈ ಮಸೂದೆಯೂ ಒಂದು. ಇನ್ನೋರ್ವ ಬಿಜೆಪಿ ಸಂಸದ ಮಹೇಶ್ ಗಿರಿ ‘ಸ್ವಚ್ಛತೆ ನಿರ್ವಹಣಾ ವಿಧೇಯಕ’ ಮಂಡಿಸಿದರೆ, ಎನ್‌ಸಿಪಿಯ ಸುಪ್ರಿಯಾ ಸುಳೆ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್‌ಗಳ ಸ್ಥಾಪನೆಯ ಮಸೂದೆಯನ್ನು ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News