ಮಹಿಳೆಯರಿಗೂ ರಟ್ಟೆ ಬಲ ಇದೆ, ಆದರೆ ಅವರು ಅದನ್ನು ತೋರಿಸುವುದಿಲ್ಲ ಎಂದು ನಾನು ಸಾಬೀತುಪಡಿಸಿದೆ: ಅಕ್ಲಿಮಾ

Update: 2017-03-12 05:35 GMT

ವರ್ಷದ ಹಿಂದೆ ನಾನು ಕೂಲಿ ಕೆಲಸ ಆರಂಭಿಸಿದೆ. ನನ್ನನ್ನೂ ಸೇರಿ ಅಲ್ಲಿ 10 ಮಂದಿ ಮಾತ್ರ ಮಹಿಳೆಯರಿದ್ದೆವು. ನಿರ್ಮಾಣದಾರ ಮಹಿಳಾ ಕೆಲಸಗಾರರನ್ನು ನೇಮಿಸಿಕೊಳ್ಳಲು ಇಚ್ಛಿಸುತ್ತಿರಲಿಲ್ಲ. ನಮ್ಮೊಂದಿಗೆ 50 ಪುರುಷರೂ ಕೆಲಸ ಮಾಡುತ್ತಿದ್ದರು. ಅವರು ಚಹಾ ಸೇವನೆ ಹಾಗೂ ಸಿಗರೇಟ್ ಸೇದಲು ವಿರಾಮ ಪಡೆಯುತ್ತಿದ್ದರು. ಆದರೆ ನಮಗೆ ಮಹಿಳೆಯರಿಗೆ ಬಿಡುವು ಇರಲಿಲ್ಲ. ಸುಮಾರು ಒಂದು ವರ್ಷ ಸದೃಢ ವ್ಯಕ್ತಿ ನಮ್ಮನ್ನು ತಮಾಷೆ ಮಾಡುತ್ತಿದ್ದ. ನಾನು ನಿದ್ದೆಯಲ್ಲಿ ಕೂಡಾ ಮಹಿಳೆಯರಿಗಿಂತ ಹೆಚ್ಚು ಕಲ್ಲು ತುಂಬಿದ ಬಕೆಟ್ ಒಯ್ಯಬಲ್ಲೆ ಎಂದೊಮ್ಮೆ ಹೇಳಿದ್ದ. ಆತನ ಜೋಕ್‌ಗೆ ಗುತ್ತಿಗೆದಾರ ಜೋರಾಗಿ ನಕ್ಕ. ಕೆಲ ಸಮಯದ ಬಳಿಕ ಆತ ಕಲ್ಲು ತುಂಬಿದ್ದ ಎಲ್ಲ ಬಕೆಟ್‌ಗಳನ್ನು ಸಾಗಿಸಿ, ತನ್ನ ತೋಳ್ಬಲ ಪ್ರದರ್ಶಿಸಿ, ನಮ್ಮತ್ತ ನಕ್ಕ. ಕೆಲದಿನಗಳ ಹಿಂದೆ ನಮಗೆ ಅರ್ಧ ಗಂಟೆಯಾದರೂ ವಿಶ್ರಾಂತಿ ಕೊಡಿ ಎಂದು ಗುತ್ತಿಗೆದಾರನನ್ನು ಕೇಳಿದೆ. ತಕ್ಷಣ ಕಟ್ಟುಮಸ್ತಾದ ವ್ಯಕ್ತಿಯನ್ನು ತೋರಿಸಿ, ನೀನು ಅಥವಾ ಯಾರೇ ಮಹಿಳೆ ಆತನನ್ನು ಕೆಲಸದಲ್ಲಿ ಮೀರಿಸಿದರೆ ಮರುದಿನದಿಂದಲೇ ನಿಮಗೂ ಸಮಾನವಾದ ವಿಶ್ರಾಂತಿ ಸಮಯ ಕೊಡುತ್ತೇನೆ ಎಂದು ಆತ ಅಣಕಿಸಿದ. ನಮ್ಮ ಮಹಿಳೆಯರ ಗುಂಪಿನತ್ತ ನೋಡಿದರೆ ಎಲ್ಲರೂ ತಲೆ ತಗ್ಗಿಸಿ ನಿಂತಿದ್ದರು. ನಾನು ಮನೆಗೆ ಹೋಗುತ್ತಿದ್ದಾಗ, ನನ್ನ ''ಪುಟ್ಟ ಹುಡುಗಿ, ಎಂದಿಗೂ ಪುರುಷರಿಗೆ ಸವಾಲು ಹಾಕಬೇಡಿ'' ಎಂದು ಎಚ್ಚರಿಸಿದಳು. ಯಾಕೆಂದು ಆಕೆಯನ್ನು ಕೇಳಿದೆ. ಐದು ವರ್ಷದ ಆಕೆ ಭಯದಿಂದಲೇ ತನ್ನ ತೋಳು ಪ್ರದರ್ಶಿಸಿ, "ನಮಗೆ ಇದು ಇಲ್ಲ" ಎಂದು ಹೇಳಿದಳು. ಮರುದಿನ ನಾನು ಕೆಲಸಕ್ಕೆ ಹೋದಾಗ, ಈ ಸವಾಲು ಸ್ವೀಕರಿಸಲು ನಾನು ಸಿದ್ಧ ಎಂದು ಅವರಿಗೆ ಹೇಳಿದೆ. ಕಟ್ಟುಮಸ್ತಾದ ವ್ಯಕ್ತಿಯ ಜತೆ ಕಲ್ಲು ತುಂಬಿದ ಬಕೆಟ್ ಒಯ್ಯುತ್ತಿದ್ದಾಗ, ಪ್ರತಿಯೊಬ್ಬರೂ ಕೆಲಸ ನಿಲ್ಲಿಸಿ ಚಪ್ಪಾಳೆ ಹೊಡೆಯಲು ಆರಂಭಿಸಿದರು. ಅದು ಒಂದು ರೀತಿಯ ಆಟವಾಯಿತು. ಎಷ್ಟು ಹೊತ್ತು ಕಳೆದಿತ್ತು ಎಂಬ ಕಲ್ಪನೆ ನನಗಿರಿಲ್ಲ. ಗುತ್ತಿಗೆದಾರ ಕೆಲಸ ನಿಲ್ಲಿಸಲು ಹೇಳಿದಾಗ, ನನ್ನೊಂದಿಗೆ ಇದ್ದ ವ್ಯಕ್ತಿಯತ್ತ ನೋಡಿದೆ. ಆತ ನೆಲದ ಮೇಲೆ ಮಲಗಿದ್ದ. ಆಗಲೇ ತೀರಾ ದಣಿದಿದ್ದ. ಆಗ ನಾನು ನೋಡಿದೆ; ಆತನಿಗಿಂತ 50 ಹೆಚ್ಚು ಬಕೆಟ್ ಕಲ್ಲು ಒಯ್ದಿದ್ದೆ. ಪ್ರತಿ ಮಹಿಳೆಯರು ಹರ್ಷೋದ್ಗಾರ ಮಾಡುತ್ತಿದ್ದರೆ, ನಾನು ನನ್ನ ಪುಟ್ಟ ಬಾಲಕಿಯತ್ತ ನೋಡಿದೆ. ಆಕೆ ನನ್ನ ಎದೆಯೆತ್ತರಕ್ಕೆ ಹಾರಿದಳು. ನಾನು ಏನೂ ಹೇಳಲಿಲ್ಲ. ಮಹಿಳೆಯರ ರಟ್ಟೆಯಲ್ಲೂ ಶಕ್ತಿ ಇದೆ; ಆದರೆ ಅದನ್ನು ತೋರಿಸುವುದಿಲ್ಲ ಅಷ್ಟೇ ಎಂದು ಆಕೆಗೆ ನಾನು ನಿರೂಪಿಸಿ ತೋರಿಸಿದ್ದೆ.

Full View

Writer - ಜಿಎಂಬಿ ಆಕಾಶ್

contributor

Editor - ಜಿಎಂಬಿ ಆಕಾಶ್

contributor

Similar News