×
Ad

ಮಾಯಾ ಮಂತ್ರ ಎಷ್ಟು ನಿಜ?

Update: 2017-03-13 00:11 IST

ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ನೆಲಕಚ್ಚಿದ್ದರೂ, ಮತಯಂತ್ರ ಹ್ಯಾಕಿಂಗ್ ಬಗ್ಗೆ ಪಕ್ಷದ ಅಧಿನಾಯಕಿ ಮಾಯಾವತಿ ಮಾಡಿರುವ ಗಂಭೀರ ಆರೋಪ ಜ್ವಾಲೆಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ದೋಷಯುಕ್ತ ಫಲಿತಾಂಶಗಳನ್ನು ನೀಡುವ ರೀತಿಯಲ್ಲಿ ಬಿಜೆಪಿ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಅವರು ದೂರಿದ್ದರು.

ಬಹುಜನ ಸಮಾಜ ಪಕ್ಷ ರಾಜ್ಯದಲ್ಲಿ ಶೇ.22ರಷ್ಟು ಮತ ಪಡೆದಿದ್ದರೂ, ಒಟ್ಟು 403 ಸದಸ್ಯಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ‘ಆನೆ ಬಲ’ 19 ಸ್ಥಾನಕ್ಕೆ ಕುಸಿದಿದೆ. ಇದು ಸರಿಸುಮಾರು ಕಾಂಗ್ರೆಸ್-ಸಮಾಜವಾದಿ ಪಕ್ಷ ಮೈತ್ರಿಕೂಟ ಪಡೆದ ಮತಪ್ರಮಾಣಕ್ಕೆ ಸನಿಹವಾಗಿದೆ. ಆದರೆ ಎಸ್ಪಿ- ಕಾಂಗ್ರೆಸ್ ಮೈತ್ರಿಕೂಟ 55 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.

ಚಲಾವಣೆಯಾದ ಮತಗಳನ್ನು ಸೂಕ್ತವಾಗಿ ವಿಶ್ಲೇಷಿಸಿದರೆ, ಮುಸ್ಲಿಮ್ ಹಾಗೂ ದಲಿತ ಮತಗಳು ವಿಭಜನೆಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ, ಇದು ಬಿಜೆಪಿ ಪರ ಮತಗಳು ಧ್ರುವೀಕರಣಗೊಳ್ಳಲು ಕಾರಣವಾಗಿದೆ. ಬಿಜೆಪಿ ರಾಜ್ಯದಲ್ಲಿ ಶೇ.40ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.

ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಯಾವತಿಯವರ ಆರೋಪ ನಿಜವಾಗಿದ್ದರೆ, ಮತಗಳಿಕೆ ಸ್ಥಾನಗಳಾಗಿ ಪರಿವರ್ತನೆಯಾಗದೆ, ಪಕ್ಷ ಗೆಲುವಿನ ದಡ ಸೇರದಿದ್ದರೂ, ಅವರ ಪಕ್ಷದ ಪರ ಅಷ್ಟೊಂದು ಅಧಿಕ ಪ್ರಮಾಣದ ಮತ ಚಲಾವಣೆಯಾಗುವುದು ಹೇಗೆ ಸಾಧ್ಯವಿತ್ತು?
ಚುನಾವಣಾ ಟ್ರೆಂಡ್ ಹಾಗೂ ಫಲಿತಾಂಶದ ಹೊರತಾಗಿಯೂ, ಇಲೆಕ್ಟ್ರಾನಿಕ್ ಮತಯಂತ್ರಗಳ ಸಮಸ್ಯೆ ಬಗ್ಗೆ ಕೇವಲ ಮಾಯಾವತಿ ಮಾತ್ರವಲ್ಲದೆ ತಜ್ಞರು ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ.

ಇವಿಎಂ ಹೇಗೆ ಕಾರ್ಯನಿರ್ವಹಿಸುತ್ತದೆ?

ಇಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಮುಖ್ಯವಾಗಿ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್ ಹಾಗೂ ಐದು ಮೀಟರ್‌ನ ಕೇಬಲ್ ಹೊಂದಿರುತ್ತದೆ. ಒಂದು ನಿಮಿಷದಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್ ಮೂಲಕ ಕೇವಲ ಐದು ಮತ ಚಲಾಯಿಸಲು ಸಾಧ್ಯ. ಏಕೆಂದರೆ ಪ್ರತೀ ಮತಗಳ ನಡುವೆ ಅದು ರೀಬೂಟ್ ಆಗಲು ಸಮಯಾವಕಾಶ ತೆಗೆದುಕೊಳ್ಳಬೇಕಾಗುತ್ತದೆ.

ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳ ಮತದ ಎಣಿಕೆ ಸುಲಭವಾಗಿದ್ದರೂ, ಇಂಥ ಮತಯಂತ್ರವನ್ನು ದುರುದ್ದೇಶದಿಂದ ತಿದ್ದುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನಲ್ಲಿರುವ ಸಂಪೂರ್ಣ ಡಾಟಾ ಕಿತ್ತುಹಾಕಲು ಅಥವಾ ಮತಗಳನ್ನು ಹಾಕುವ ಸಾಫ್ಟ್‌ವೇರ್ ಹೊಂದಾಣಿಕೆ ಮಾಡಲು ಅಂತಿಮವಾಗಿ ಫಲಿತಾಂಶದ ಮೇಲೆ ಹಸ್ತಕ್ಷೇಪ ಮಾಡಿ ತಮಗೆ ಬೇಕಾದಂತೆ ಫಲಿತಾಂಶ ಪಡೆಯಲು ಅವಕಾಶವಿದೆ ಎಂದು ತಜ್ಞ ಹ್ಯಾಕರ್‌ಗಳು ಹೇಳುತ್ತಾರೆ.

ಕಾಗದದ ಮತಪತ್ರಗಳಿಗಿಂತ ಭಿನ್ನವಾಗಿ ಸಮರ್ಪಕವಾದ ಪಾರದರ್ಶಕತೆಯ ಕೊರತೆ ಇದ್ದು, ಫಲಿತಾಂಶವನ್ನು ತಿದ್ದಲು ಅವಕಾಶವಿದೆ. ಮತದಾರರು ಹಾಗೂ ಚುನಾವಣಾ ಅಧಿಕಾರಿಗಳು ಮಾದರಿ ನೀತಿಸಂಹಿತೆಯನ್ನು ಪಾಲಿಸಿದರೆ ಮಾತ್ರ ಈ ವ್ಯವಸ್ಥೆಯ ಮೇಲೆ ವಿಶ್ವಾಸ ಇಡಬಹುದಾಗಿದೆ.

ನೆದರ್ಲೆಂಡ್ಸ್, ಐರ್ಲೆಂಡ್, ಜರ್ಮನಿ, ಇಟಲಿಯಂಥ ದೇಶಗಳು ಹಾಗೂ ಕ್ಯಾಲಿಫೋರ್ನಿಯಾದಂಥ ರಾಜ್ಯಗಳು ಚುನಾವಣೆಯಲ್ಲಿ ಮತಯಂತ್ರಗಳ ಬಳಕೆಯನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಇಲೆಕ್ಟ್ರಾನಿಕ್ ಮತಯಂತ್ರಗಳ ದೋಷವನ್ನು ಸರಿಪಡಿಸುವ ಸಲುವಾಗಿ ಕಾಗದ ಮತಪತ್ರಕ್ಕೇ ಮರಳಿವೆ.

ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ಸ್ವಾಮಿಯವರೇ ಸ್ವತಃ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳನ್ನು ತಮಗೆ ಬೇಕಾದಂತೆ ತಿದ್ದಲು ಅವಕಾಶವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹಾಗಾದರೆ ಮಾಯಾವತಿಯವರ ಆರೋಪ ಸಮರ್ಥನೀಯವೇ? ಇಲೆಕ್ಟ್ರಾನಿಕ್ ಮತಯಂತ್ರಗಳ ಡಾಟಾವನ್ನು ಸ್ವತಂತ್ರ ಸಂಸ್ಥೆಗಳು ತನಿಖೆಗೆ ಒಳಪಡಿಸಬೇಕೇ?

ಮಾಯಾವತಿಯವರ ಆರೋಪಕ್ಕೆ ಅಖಿಲೇಶ್ ಯಾದವ್ ಪ್ರಜ್ಞಾಪೂರ್ವಕವಾಗಿ ದನಿಗೂಡಿಸಿದ್ದರೂ, ಮೋದಿ ಸುನಾಮಿಯ ಅಂಶಗಳಾದ ಮತಹಂಚಿಕೆ ಹಾಗೂ ಇತರ ಅಂಶಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ?

ಹಳೆಯ ಪದ್ಧತಿಯಂತೆ ಹೊಸದಾಗಿ ಚುನಾವಣೆಗಳು ನಡೆಯಬೇಕು, ಮತಪತ್ರಗಳನ್ನು ಮತದಾರರಿಗೆ ನೀಡಿ ಅವರು ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕು. ಅಮೆರಿಕದಲ್ಲಿ ಕೂಡಾ ತಾಂತ್ರಿಕ ಲೋಪಗಳು ಕಂಡುಬಂದ ಬಳಿಕ ಮತಪತ್ರಗಳನ್ನು ಬಳಕೆ ಮಾಡಿಕೊಂಡ ನಿದರ್ಶನವಿದೆ ಎಂದು ಮಾಯಾವತಿ ಹೇಳಿದ್ದರು.

ಬಹುಶಃ ಅವರ ಐಡೆಂಟಿಟಿ ರಾಜಕೀಯ ಹಾಗೂ ಜಾತಿ ಆಧರಿತ ಪ್ರಾತಿನಿಧ್ಯ ಚಳವಳಿ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ್ದರೂ, ಅದರನ್ನು ಜನರಿಗೆ ನೀಡುವುದು ಸಾಧ್ಯವಾಗಿಲ್ಲ. ಭಾರತೀಯ ರಾಜಕೀಯರಂಗದಲ್ಲಿ ತಂತ್ರಜ್ಞಾನದ ಬದಲಾವಣೆಗಳು ವ್ಯಾಪಕವಾಗಿ ಆಗುತ್ತಿದ್ದರೂ, ಮಾಯಾವತಿ ಇದನ್ನು ಅಳವಡಿಸಿಕೊಳ್ಳುವಲ್ಲಿ ತೀರಾ ಹಿಂದೆ ಬಿದ್ದಿದ್ದಾರೆ.

ವಿದೇಶಿ ತಜ್ಞರಿಂದ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿರುವುದು ಬಿಎಸ್ಪಿಯ ಹತಾಶೆಗೆ ಹಿಡಿದ ಕನ್ನಡಿ. ಏಕೆಂದರೆ ಮೌನವಾಗಿರುವ ಬಿಎಸ್ಪಿ ಮತದಾರನ ಬಗೆಗಿನ ಭ್ರಮೆ ಈ ಚುನಾವಣೆಯಲ್ಲಿ ಕರಗಿದೆ. ರಾಜಕೀಯ ಸಾಮಾಜಿಕ ನ್ಯಾಯದ ಆಸೆಯನ್ನು ಮೋದಿ ತೋರಿಸಿದ್ದರೂ, ಇದು ಸಮಯ ಬಂದಾಗ ಮಾಯಾವತಿಗೆ ಪ್ರಬಲ ಅಸ್ತ್ರವಾಗಬಲ್ಲದು.

ಕೃಪೆ: www.dailyo.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ

ಜಗ ದಗಲ